×
Ad

ಡಿಜಿಟಲ್ ಮಾಧ್ಯಮಗಳ ಸ್ವನಿಯಂತ್ರಣಕ್ಕೆ ನಿಯಮ ರೂಪಿಸಲು ಸರಕಾರದ ನಿರ್ಧಾರ

Update: 2021-01-16 23:20 IST

ಹೊಸದಿಲ್ಲಿ, ಜ.16: ನಕಲಿ ಸುದ್ದಿಗಳ ಪ್ರಸಾರವನ್ನು ನಿರ್ಬಂಧಿಸುವ ನಿಟ್ಟಿನಲ್ಲಿ ಸುದ್ದಿ ವೆಬ್‌ಸೈಟ್ ಹಾಗೂ ಒಟಿಟಿ ವೇದಿಕೆ ಸಹಿತ ಡಿಜಿಟಲ್ ಮಾಧ್ಯಮಗಳ ಸ್ವಯಂ ನಿಯಂತ್ರಣಕ್ಕೆ ಅನುವು ಮಾಡಿಕೊಡುವ ನಿಯಮವನ್ನು ರೂಪಿಸಲು ಕೇಂದ್ರ ಸರಕಾರ ನಿರ್ಧರಿಸಿದೆ ಎಂದು ಮೂಲಗಳು ಹೇಳಿವೆ.

ಪ್ರಿಂಟ್ ಮೀಡಿಯಾಕ್ಕೆ ಸಂಬಂಧಿಸಿ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ, ಸಿನೆಮಗಳಿಗೆ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್, ಟಿವಿ ಚಾನೆಲ್‌ಗಳಿಗೆ ಕೇಬಲ್ ಟೆಲಿವಿಷನ್ ನೆಟ್‌ವರ್ಕ್ಸ್ ರೆಗ್ಯುಲೇಷನ್ ಕಾಯ್ದೆಯ ನಿಯಂತ್ರಣವಿದೆ. ಆದರೆ ಡಿಜಿಟಲ್ ಮೀಡಿಯಾಕ್ಕೆ ಇದುವರೆಗೆ ಯಾವುದೇ ನಿಯಂತ್ರಣ ಪ್ರಾಧಿಕಾರ ಇರದಿರುವುದರಿಂದ ಈ ವೇದಿಕೆಯಲ್ಲಿ ಪ್ರಸಾರವಾಗುವ ವೀಡಿಯೊ, ಸುದ್ದಿಗಳಿಗೆ ಸಂಬಂಧಿಸಿದ ದೂರು, ಆಕ್ಷೇಪವನ್ನು ದಾಖಲಿಸುವ ವ್ಯವಸ್ಥೆಯ ಅಗತ್ಯವನ್ನು ಮನಗಂಡು ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ದೇಶದಲ್ಲಿ ಒಟಿಟಿ (ಓವರ್ ದಿ ಟಾಪ್) ವೇದಿಕೆಯ ಮಾರುಕಟ್ಟೆ ಸುಮಾರು 1000 ಕೋಟಿ ರೂ.ಗಳಾಗಿದ್ದು ಸುಮಾರು 20 ಕೋಟಿ ಬಳಕೆದಾರರಿದ್ದಾರೆ. ಕೆಲವು ಒಟಿಟಿ ವೇದಿಕೆಗಳು ವಾರ್ಷಿಕ ಚಂದಾ ಶುಲ್ಕ ವಿಧಿಸಿದರೆ ಹೆಚ್ಚಿನವು ಉಚಿತವಾಗಿದೆ. ಪ್ರಸ್ತಾವಿತ ನಿಯಮದಿಂದ ಒಟಿಟಿ ವೇದಿಕೆಗಳ ಸ್ವಾತಂತ್ರಕ್ಕೆ ಧಕ್ಕೆಯಾಗದ ರೀತಿಯಲ್ಲಿ ಕಾನೂನು ರೂಪಿಸಲಾಗುತ್ತದೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News