ತನ್ನನ್ನು ಮಹಾಮೂರ್ಖ ಎಂದು ಅರ್ನಬ್ ಹೇಳಿದ್ದರೆನ್ನಲಾದ ಬಗ್ಗೆ ರಜತ್ ಶರ್ಮಾ ಪ್ರತಿಕ್ರಿಯಿಸಿದ್ದು ಹೀಗೆ

Update: 2021-01-17 18:23 GMT

ಹೊಸದಿಲ್ಲಿ: ಬಾರ್ಕ್ ನ ಮಾಜಿ ಸಿಇಒ ಪಾರ್ಥೋ ದಾಸ್ ಗುಪ್ತಾ ಹಾಗೂ  ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ನಡುವೆ ನಡೆದಿದೆ ಎನ್ನಲಾಗಿರುವ ವ್ಯಾಟ್ಸ್ ಆ್ಯಪ್ ಸಂಭಾಷಣೆ ಸೋರಿಕೆಯಾಗಿದ್ದು, ಇದು ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ಚಾಟ್ ನಲ್ಲಿ  ಇಂಡಿಯಾ ಟಿವಿ ಸ್ಥಾಪಕ ರಜತ್ ಶರ್ಮಾರನ್ನು ಗೋಸ್ವಾಮಿ ‘ಮಹಾಮೂರ್ಖ’ ಎಂದು ಕರೆದಿದ್ದಾರೆಂಬ ಕುರಿತು ಶರ್ಮಾ ಅವರು ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿದ್ದಾರೆ.

ಹಿಂದಿಯಲ್ಲಿ ಟ್ವೀಟಿಸಿದ ರಜತ್. ಶರ್ಮಾ,”ನಾನು ಮೌನವಾಗಿದ್ದೇನೆ. ಏಕೆಂದರೆ ನನ್ನಲ್ಲಿ ಕೆಲವೆ ಪದಗಳಿವೆ. ನನ್ನ ಗೌರವ ಕಳಂಕಿತವಾಗದೇ ಇರುವುದರಿಂದ ನಾನೀಗಲೂ ಮೌನವಾಗಿದ್ದೇನೆ’ ಎಂದು ಬರೆದಿದ್ದಾರೆ.

ಭಾರತದ ಮಾಜಿ ನಾಯಕ ಸೌರವ್ ಗಂಗುಲಿ ಅವರನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷರನ್ನಾಗಿ ನೇಮಕ ಮಾಡುವ ಬಗ್ಗೆ ಗೋಸ್ವಾಮಿ 2019ರ ಅಕ್ಟೋಬರ್  14ರಂದು ದಾಸ್ ಗುಪ್ತಾ ಅವರಿಗೆ ಪತ್ರ ಬರೆದಿದ್ದರು. ಇದು ನಿಜವಾಗಿಯೂ ರಜತ್ ನನ್ನು ಅವರ ಸ್ಥಾನದಲ್ಲಿರಿಸುತ್ತದೆ. ಅವರ ಪ್ರಭಾವ ಈಗ ಕಡಿಮೆಯಾಗಿದೆ. ಈಗ ಡಿಡಿಸಿಎ(ದಿಲ್ಲಿ ಜಿಲ್ಲಾ ಹಾಗೂ ಕ್ರಿಕೆಟ್ ಸಂಸ್ಥೆ) ಭ್ರಷ್ಟಾಚಾರದಲ್ಲಿ ಸಿಲುಕಿದೆ. ರಜತ್ ಕುರಿತು ಹಾಗೂ ಅವರ ಕಳಪೆ ಗುಣಮಟ್ಟದ ಚಾನೆಲ್ ಬಗ್ಗೆ ಚಿಂತೆ ಮಾಡುವ ಅಗತ್ಯವಿಲ್ಲ ಎಂದು ಪತ್ರದಲ್ಲಿ ಬರೆದಿದ್ದರು.

ಶರ್ಮಾ ಇನ್ನೂ ಐಬಿಎಫ್ ಮಂಡಳಿಯಲ್ಲಿದ್ದಾರೆ ಎಂದು ದಾಸ್ ಗುಪ್ತಾ ನೆನಪಿಸಿದಾಗ, ಬನ್ನಿ, ಇನ್ನೂ ಅನೇಕ ಜನರಿದ್ದಾರೆ. ವಾಸ್ತವಾಂಶವೇನೆಂದರೆ ರಜತ್ ಗೆ ಯಾವುದೇ ಪ್ರಭಾವವಿಲ್ಲ. ಅವರ ಗೃಹಿಕೆಯ ಪ್ರಭಾವ ಪರಿಣಾಮಬೀರಲು ನೀವು ಬಿಡಬಾರದು ಎಂದು ಗೋಸ್ವಾಮಿ ಹೇಳಿದ್ದಾರೆ.

ಭಾರತಿಯ ಬ್ರಾಡ್ ಕಾಸ್ಟಿಂಗ್ ಫೌಂಡೇಶನ್(ಐಬಿಎಫ್)ಇತರ ಮಂಡಳಿ ಸದಸ್ಯರು ಸಹ ಶರ್ಮಾ ಅವರು ಅಪ್ರಸ್ತುತರಾಗಿದ್ದಾರೆಂದು ಅರಿತುಕೊಂಡಿದ್ದಾರೆ ಎಂದ ಗೋಸ್ವಾಮಿ, ತಾನು ಬಿಸಿಸಿಐಯಲ್ಲಿ ಹಿಡಿತ ಸಾಧಿಸುತ್ತೇನೆ ಎಂದು ರಜತ್ ಘೋಷಿಸಿಕೊಂಡಿದ್ದರು. ಇದೀಗ ಅವರು ಶತಮೂರ್ಖನಂತೆ ಕಾಣುತ್ತಿದ್ದಾರೆ ಎಂದು ಗೋಸ್ವಾಮಿ ಚಾಟಿಂಗ್ ನಲ್ಲಿ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News