ಭ್ರಷ್ಟಾಚಾರ ಹಗರಣ: ಸ್ಯಾಮ್‌ಸಂಗ್ ಉಪಾಧ್ಯಕ್ಷ ಜೈ ಲೀ ಗೆ ಜೈಲು ಶಿಕ್ಷೆ

Update: 2021-01-18 18:17 GMT

ಸ್ಯಾಮ್ಸಂಗ್‌ಸಿಯೋಲ್ (ದಕ್ಷಿಣ ಕೊರಿಯ), ಜ. 18: ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ, ದಕ್ಷಿಣ ಕೊರಿಯದ ನ್ಯಾಯಾಲಯವೊಂದು ಸ್ಯಾಮ್ಸಂಗ್ ಇಲೆಕ್ಟ್ರಾನಿಕ್ಸ್‌ನ ಉಪಾಧ್ಯಕ್ಷ ಜೈ ವೈ. ಲೀಗೆ ಸೋಮವಾರ ಎರಡೂವರೆ ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಮಾಜಿ ಅಧ್ಯಕ್ಷೆ ಪಾರ್ಕ್ ಜ್ಯೂನ್ -ಹೈಯ ಸಹಾಯಕರೊಬ್ಬರಿಗೆ ಲಂಚ ನೀಡಿದ ಆರೋಪದಲ್ಲಿ, 52 ವರ್ಷದ ದೇಶದ ಅತ್ಯಂತ ಪ್ರಭಾವಿ ಉದ್ಯಮಿ 2018ರಲ್ಲಿ ಒಂದು ವರ್ಷ ಜೈಲಿನಲ್ಲಿ ಕಳೆದಿದ್ದರು. ಆದರೆ, ಬಳಿಕ ಮೇಲ್ಮನವಿ ನ್ಯಾಯಾಲಯವೊಂದು ಶಿಕ್ಷೆಯನ್ನು ಅಮಾನತಿನಲ್ಲಿಟ್ಟಾಗ ಅವರ ಬಿಡುಗಡೆಯಾಗಿದ್ದರು.

ಆದರೆ, ಅವರ ಮರುವಿಚಾರಣೆಯಾಗಬೇಕು ಎಂದು ವರ್ಷದ ಬಳಿಕ ಸುಪ್ರೀಂ ಕೋರ್ಟ್ ಆದೇಶ ನೀಡಿತು. ಈಗ ಮರುವಿಚಾರಣೆ ನಡೆದು ಅವರಿಗೆ ಎರಡೂವರೆ ವರ್ಷ ಜೈಲು ಶಿಕ್ಷೆಯಾಗಿದೆ. ಒಂದು ವರ್ಷವನ್ನು ಅವರು ಈಗಾಗಲೇ ಜೈಲಿನಲ್ಲಿ ಕಳೆದಿರುವುದರಿಂದ ಇನ್ನು ಅವರು ಒಂದೂವರೆ ವರ್ಷದ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗಿದೆ.

ಅಕ್ಟೋಬರ್‌ನಲ್ಲಿ ಅವರ ತಂದೆ ನಿಧನರಾಗಿದ್ದು, ಜೈಲು ಶಿಕ್ಷೆಯಿಂದಾಗಿ ಕಂಪೆನಿಯ ಅಧಿಕಾರ ಹಸ್ತಾಂತರ ವಿಳಂಬವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News