ಐಸ್ ಕ್ರೀಂ ಸ್ಯಾಂಪಲ್ ಗಳಲ್ಲೂ ಕೋವಿಡ್ ವೈರಾಣು ಪತ್ತೆ!

Update: 2021-01-18 10:39 GMT

ಚೀನಾ,ಜ.18: ಚೀನಾದ ಟಿಯಾಂಜಿನ್ ನಗರದಲ್ಲಿ ಐಸ್‍ಕ್ರೀಂ ಸ್ಯಾಂಪಲ್‍ಗಳಲ್ಲಿ ಕೋವಿಡ್-19 ವೈರಾಣು ಪತ್ತೆಯಾಗಿದೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಸರಕಾರ ಈ ಐಸ್‍ಕ್ರೀಂ ಉತ್ಪನ್ನದ ಮಾರಾಟ ತಡೆ ಹಿಡಿದಿದೆಯಲ್ಲದೆ ಐಸ್‍ಕ್ರೀಂ ಉತ್ಪಾದಕಾ ಸಂಸ್ಥೆಯ ಸುಮಾರು 1,662 ಉದ್ಯೋಗಿಗಳಿಗೆ ಕ್ವಾರಂಟೈನಿಗೊಳಗಾಗುವಂತೆ ಸೂಚಿಸಿದೆ.

ಬೀಜಿಂಗಿಗೆ ಹತ್ತಿರದಲ್ಲಿರುವ ಟಿಯಾಂಜಿನ್ ನಗರದಲ್ಲಿನ ಡಖಿಯಾಡೋವೊ ಫುಡ್ ಕಂಪನಿಯ ಮೂರು ಸ್ಯಾಂಪಲ್‍ಗಳಲ್ಲಿ  ಕೋವಿಡ್ ಪತ್ತೆಯಾಗಿದೆ. ಈ ಐಸ್‍ಕ್ರೀಂ ಖರೀದಿಸಿದವರು ಹಾಗೂ ತಿಂದವರಿಗೆ ತಮ್ಮ ಆರೋಗ್ಯದ ಮೇಲೆ ನಿಗಾ ಇಡುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಈ ಐಸ್‍ಕ್ರೀಂ ತಯಾರಿಸಲು ಹಾಲಿನ ಪುಡಿಯನ್ನು ನ್ಯೂಜಿಲೆಂಡ್‍ನಿಂದ ಹಾಗೂ ಇತರ ಕೆಲ ಕಚ್ಛಾ ವಸ್ತುಗಳನ್ನು ಉಕ್ರೇನ್‍ನಿಂದ ತರಿಸಲಾಗಿತ್ತು ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News