ಕೊರೋನ ಸಕ್ರಿಯ ಪ್ರಕರಣ ನಿರಂತರ ಇಳಿಕೆ: ಆರೋಗ್ಯ ಇಲಾಖೆ

Update: 2021-01-18 14:36 GMT

ಹೊಸದಿಲ್ಲಿ, ಜ.18: ಭಾರತದಲ್ಲಿ ಕೊರೋನ ಸೋಂಕಿನ ಸಕ್ರಿಯ ಪ್ರಕರಣ ನಿರಂತರ ಇಳಿಕೆಯಾಗುತ್ತಿದೆ. ಸಕ್ರಿಯ ಪ್ರಕರಣ ಹಾಗೂ ಚೇತರಿಕೆಯ ಪ್ರಕರಣದ ನಡುವಿನ ಅಂತರ 1 ಕೋಟಿಗೆ ತಲುಪಿದ್ದು ಇದೊಂದು ಮಹತ್ವದ ಸಾಧನೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಸೋಮವಾರ ಹೇಳಿದೆ.

ಸೋಮವಾರದ ಬೆಳಗ್ಗಿನವರೆಗಿನ ಮಾಹಿತಿಯಂತೆ ದೇಶದಲ್ಲಿ ಕೊರೋನ ಸಕ್ರಿಯ ಪ್ರಕರಣ 2,08,012 ಆಗಿದ್ದರೆ ಚೇತರಿಕೆ ಪ್ರಕರಣ 1,02,11,342 ಆಗಿದೆ. ಇದರೊಂದಿಗೆ ಚೇತರಿಕೆಯ ಪ್ರಮಾಣ 96.59%ಕ್ಕೆ ತಲುಪಿದೆ. ಸೋಮವಾರ ಬೆಳಗ್ಗಿನವರೆಗಿನ 24 ಗಂಟೆಯ ಅವಧಿಯಲ್ಲಿ 14,457 ಮಂದಿ ಚೇತರಿಸಿಕೊಂಡಿದ್ದರೆ, ಇದೇ ಅವಧಿಯಲ್ಲಿ 13,788 ಹೊಸ ಪ್ರಕರಣ ವರದಿಯಾಗಿದೆ ಮತ್ತು 145 ಮಂದಿ ಮೃತಪಟ್ಟಿದ್ದಾರೆ. ಅಲ್ಲದೆ ಈ ಅವಧಿಯಲ್ಲಿ 15 ರಾಜ್ಯಗಳಲ್ಲಿ, ಕೊರೋನ ಸೋಂಕಿನಿಂದ ಯಾವುದೇ ಸಾವು ಸಂಭವಿಸಿಲ್ಲ.

ದೇಶದಲ್ಲಿ ದೈನಂದಿನ ಸೋಂಕಿನ ಪ್ರಮಾಣ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಕೊರೋನ ಸೋಂಕಿನಿಂದ ಆಗುವ ಮರಣದ ಪ್ರಮಾಣವೂ ಕಡಿಮೆಯಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News