ನಟ ಸುಶಾಂತ್ ಸಾವು ಪ್ರಕರಣದಲ್ಲಿ ‘ಮಾಧ್ಯಮಗಳು’ ನ್ಯಾಯಾಂಗದ ಮಧ್ಯಪ್ರವೇಶಿಸಿದೆ: ಬಾಂಬೆ ಹೈಕೋರ್ಟ್

Update: 2021-01-18 14:50 GMT

ಮುಂಬೈ, ಜ. 18: ಯಾವುದೇ ಪ್ರಕರಣದ ತನಿಖೆ ಸಂದರ್ಭದ ‘ಮಾಧ್ಯಮ ವಿಚಾರಣೆ’ ಕೇಬಲ್ ಟಿವಿ ನೆಟ್‌ವರ್ಕ್ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಕಾರ್ಯಕ್ರಮ ಸಂಹಿತೆಯನ್ನು ಉಲ್ಲಂಘಿಸುತ್ತದೆ ಹಾಗೂ ತನಿಖೆಯ ಮೇಲೆ ಪ್ರಭಾವ ಬೀರುತ್ತದೆ ಎಂದು ಬಾಂಬೆ ಉಚ್ಚ ನ್ಯಾಯಾಲಯ ಸೋಮವಾರ ಹೇಳಿದೆ.

ಇಲೆಕ್ಟ್ರಾನಿಕ್ಸ್ ಮಾಧ್ಯಮ ತಮ್ಮ ಸ್ವಂತ ಮಾರ್ಗಸೂಚಿ ರೂಪಿಸುವ ವರೆಗೆ ಭಾರತೀಯ ಪತ್ರಿಕಾ ಮಂಡಳಿಯ ಮಾರ್ಗಸೂಚಿಗಳು ಮುದ್ರಣ ಮಾಧ್ಯಮ ಹಾಗೂ ಎಲೆಕ್ಟ್ರಾನಿಕ್ಸ್ ಮಾಧ್ಯಮ ಎರಡಕ್ಕೂ ಅನ್ವಯಿಸುತ್ತದೆ ಎಂದು ನಾಯಾಲಯ ತಿಳಿಸಿದೆ. ಮಾಧ್ಯಮ ವಿಚಾರಣೆ ಕ್ರಿಮಿನಲ್ ನ್ಯಾಯಾ ನಿರ್ವಹಣೆಯಲ್ಲಿ ಹಸ್ತಕ್ಷೇಪ ನಡೆಸುತ್ತದೆ ಎಂದು ನ್ಯಾಯಾಲಯ ಪ್ರತಿಪಾದಿಸಿದೆ. ‘ರಿಪಬ್ಲಿಕ್ ಟಿವಿ’ ಹಾಗೂ ‘ಟೈಮ್ಸ್ ನೌ’ ವಾಹಿನಿಗಳ ಕೆಲವು ವರದಿಗಳು ಮೇಲ್ನೋಟಕ್ಕೆ ಕಾನೂನು ಉಲ್ಲಂಘನೀಯವಾಗಿದೆ ಎಂದು ಅದು ಹೇಳಿದೆ.

ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣದಲ್ಲಿ ‘ಮಾಧ್ಯಮ ವಿಚಾರಣೆ’ ವಿರುದ್ಧದ ಆದೇಶಕ್ಕೆ ತಡೆ ನೀಡುವಂತೆ ಕೋರಿ ಮಹಾರಾಷ್ಟ್ರದ 8 ಮಂದಿ ಮಾಜಿ ಪೊಲೀಸ್ ಅಧಿಕಾರಿಗಳು, ಹೋರಾಟಗಾರರು, ವಕೀಲರು ಹಾಗೂ ಸರಕಾರೇತರ ಸಂಸ್ಥೆಗಳು ಕಳೆದ ನವೆಂಬರ್‌ನಲ್ಲಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ದಾವೆಯ ಕುರಿತು ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತಾ ಹಾಗೂ ನ್ಯಾಯಮೂರ್ತಿ ಗಿರೀಶ್ ಎಸ್. ಕುಲಕರ್ಣಿ ಇಂದು ಆದೇಶ ನೀಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News