ಸಾಲ್ಮರ ಸೈಯ್ಯದ್ ಮಲೆ ಜುಮಾ ಮಸೀದಿಯ ವಾರ್ಷಿಕ ಮಹಾಸಭೆ, ಪದಾಧಿಕಾರಿಗಳ ಆಯ್ಕೆ

Update: 2021-01-19 06:50 GMT
ನೂರುದ್ದೀನ್ - ಜುನೈದ್ 

ಪುತ್ತೂರು : ಸಾಲ್ಮರ ಸೈಯ್ಯದ್ ಮಲೆ ಜುಮಾ ಮಸೀದಿಯ ವಾರ್ಷಿಕ ಮಹಾ ಸಭೆಯು ಅನ್ಸಾರುದ್ದೀನ್ ಜಮಾಅತ್ ಅಧ್ಯಕ್ಷರಾದ ಎಲ್ ಟಿ ಅಬ್ದುಲ್ ರಝಾಕ್ ಹಾಜಿ ಅದ್ಯಕ್ಷತೆಯಲ್ಲಿ ಸೈಯ್ಯದ್ ಮಲೆ ಮದ್ರಸ ವಠಾರದಲ್ಲಿ ರವಿವಾರ ನಡೆಯಿತು.

ಸೈಯ್ಯದ್ ಎಸ್ ಎಂ ಮುಹಮ್ಮದ್ ತಂಙಳ್ ದುವಾದೊಂದಿಗೆ ಸ್ದಳೀಯ ಮಸೀದಿಯ ಖತೀಬ್ ಅಲ್ ಹಾಜ್ ಉಮರ್ ದಾರಿಮಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಕಮಿಟಿಯ ವರದಿಯನ್ನು ಹಸನ್ ಮುದ್ದೋಡಿ ಮಂಡಿಸಿದರು ನಂತರ ನೂತನ ಕಮಿಟಿಯನ್ನು ರಚಿಸಲಾಯಿತು.

ಅಧ್ಯಕ್ಷರಾಗಿ ನೂರುದ್ದೀನ್ ಸಾಲ್ಮರ, ಉಪಾಧ್ಯಕ್ಷರಾಗಿ ಇಸ್ಮಾಯಿಲ್ ಸಾಲ್ಮರ, ಹುಸೈನ್ ಕೆರೆಮೂಲೆ, ಪ್ರಧಾನ ಕಾರ್ಯದರ್ಶಿಯಾಗಿ ಜುನೈದ್ ಸಾಲ್ಮರ, ಜತೆ ಕಾರ್ಯದರ್ಶಿಯಾಗಿ ಯೂಸುಫ್ ತಾರಿಗುಡ್ಡೆ, ಕೋಶಾಧಿಕಾರಿಯಾಗಿ ಮುಹಮ್ಮದ್ ಕೊಲ್ಪೆ ಹಾಗೂ 23 ಸದಸ್ಯರ ಸಮಿತಿಯನ್ನೂ ರಚಿಸಲಾಯಿತು.

ಸಭೆಯಲ್ಲಿ ಅನ್ಸಾರುದ್ದೀನ್ ಜಮಾಅತ್ ಕಾರ್ಯದರ್ಶಿ ಯಾಕೂಬ್ ಖಾನ್, ಅನ್ಸಾರುದ್ದೀನ್ ಜಮಾಅತ್ ಸದಸ್ಯರಾದ ಶೇಖ್ ಝೈನುದ್ದೀನ್, ಅಬ್ದುಲ್ಲಾ ಕೂರ್ನಡ್ಕ, ಅಬ್ದುಲ್ಲಾ ಹಾಜಿ ಸಾಲ್ಮರ ಹಾಗು ಇತರರು ಉಪಸಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News