ಮುಲ್ಕಿ- ಮೂಡಬಿದಿರೆ ಇಂಟೆಕ್ ಉಪಾಧ್ಯಕ್ಷರಾಗಿ ಅಶ್ರಫ್ ಪಡುತೋಟ ಆಯ್ಕೆ

Update: 2021-01-19 17:41 GMT

ಮಂಗಳೂರು, ಜ.19: ಮುಲ್ಕಿ- ಮೂಡಬಿದಿರೆ ಕ್ಷೇತ್ರದ ಇಂಟೆಕ್‌ನ ಉಪಾಧ್ಯಕ್ಷರಾಗಿ ಮುಹಮ್ಮದ್ ಅಶ್ರಫ್ ಪಡುತೋಟ ಅವರು ಆಯ್ಕೆಯಾಗಿದ್ದಾರೆ.

ಇವರನ್ನು ಯುವ ಇಂಟೆಕ್‌ನ ಜಿಲ್ಲಾಧ್ಯಕ್ಷರಾದ ಚಿರಂಜೀವಿ ಹಾಗೂ ಮುಲ್ಕಿ- ಮೂಡಬಿದಿರೆ ಕ್ಷೇತ್ರದ ಇಂಟೆಕ್‌ನ ಅಧ್ಯಕ್ಷ ಮೋಹನ್ ಸುವರ್ಣ ಅವರ ಶಿಪಾರಸ್ಸಿನ ಮೇರೆಗೆ ಆಯ್ಕೆ ಮಾಡಲಾಗಿದೆ.

ಹಳೆಯಂಗಡಿಯಲ್ಲಿರುವ ಮುಲ್ಕಿ ಬ್ಲಾಕ್ ಕಾಂಗ್ರೆಸ್‌ನ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಕೆಪಿಸಿಸಿ ಕೊ- ಆಡಿನೇಟರ್ ವಸಂತ್ ಬೆರ್ನಾರ್ಡ್ ಅವರು ನೂತನ ಉಪಾಧ್ಯಕ್ಷರಿಗೆ ಪ್ರಮಾಣ ಪತ್ರವನ್ನು ಹಸ್ತಾಂತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News