ಭಾರತದಿಂದ ಬಾಂಗ್ಲಾ,ನೇಪಾಳ ಸಹಿತ 6 ದೇಶಗಳಿಗೆ ಕೋವಿಡ್ ಲಸಿಕೆ ಪೂರೈಕೆ

Update: 2021-01-19 17:52 GMT

ಹೊಸದಿಲ್ಲಿ,ಜ.19: ಭೂತಾನ್, ಮಾಲ್ದೀವ್ಸ್, ಬಾಂಗ್ಲಾದೇಶ, ನೇಪಾಳ,ಮ್ಯಾನ್ಮಾರ್ ಹಾಗೂ ಸೆಶೆಲ್ಸ್ ದೇಶಗಳಿಗೆ ಬುಧವಾರದಿಂದ ಕೋವಿಡ್-19 ಲಸಿಕೆಗಳನ್ನು ಪೂರೈಕೆ ಮಾಡುವುದಾಗಿ ಭಾರತ ಪ್ರಕಟಿಸಿದೆ.

ಮುಂಬರುವ ವಾರಗಳಲ್ಲಿ ಹಾಗೂ ತಿಂಗಳುಗಳಲ್ಲಿ ಭಾರತವು ದೇಶೀಯ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಹಂತಹಂತವಾಗಿ ಪಾಲುದಾರ ರಾಷ್ಟ್ರಗಳಿಗೆ ಅನುದಾನ ನೆರವಿನಡಿಯಲ್ಲಿ ಕೋವಿಡ್-19 ಲಸಿಕೆಗಳನ್ನು ಪೂರೈಕೆ ಮಾಡಲಿದೆಯೆಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಂಗಳಾರ ತಿಳಿಸಿದೆ.

ಶ್ರೀಲಂಕಾ,ಅಫ್ಘಾನಿಸ್ತಾನ ಹಾಗೂ ಮಾರಿಶಸ್‌ಗಳಿಗೆ ಲಸಿಕೆಗಳ ಪೂರೈಕೆಗೆ ಸಂಬಂಧಿಸಿ ಅಗತ್ಯವಿರುವ ಶಾಸನಾತ್ಮಕ ಅನುಮೋದನೆಗಳಿಗಾಗಿ ಕಾಯಲಾಗುತ್ತಿದೆಯೆಂದು ಅದು ಹೇಳಿದೆ.

 ಭಾರತದಲ್ಲಿ ಉತ್ಪಾದನೆಯಾಗಿರುವ ಕೋವಿಡ್-19 ಲಸಿಕೆಗಳ ಪೂರೈಕೆಗಾಗಿ ನೆರೆಹೊರೆಯ ಹಾಗೂ ಪ್ರಮುಖ ಪಾಲುದಾರ ದೇಶಗಳಿಂದ ಹಲವಾರು ಬೇಡಿಕೆಗಳು ಬಂದಿರುವುದಾಗಿ ವಿದೇಶಾಂಗ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.

‘‘ಈ ಬೇಡಿಕೆಗಳಿಗೆ ಪ್ರತಿಕ್ರಿಯೆಯಾಗಿ ಹಾಗೂ ಕೋವಿಡ್ 19 ವಿರುದ್ಧ ಮಾನವಕುಲದ ಹೋರಾಟಕ್ಕೆ ನೆರವಾಗುವ ಭಾರತದ ಘೋಷಿತ ಬದ್ಧತೆಗೆ ಅನುಗುಣವಾಗಿ ಭೂತಾನ್, ಮಾಲ್ದೀವ್ಸ್, ಬಾಂಗ್ಲಾದೇಶ, ನೇಪಾಳ,ಮ್ಯಾನ್ಮಾರ್ ಹಾಗೂ ಸೆಶೆಲ್ಸ್‌ಗೆ ಜನವರಿ 20ರಿಂದ ಅನುದಾನ ನೆರವಿನಡಿ ಲಸಿಕೆಗಳನ್ನು ಪೂರೈಕೆ ಮಡಲಾಗುವುದು ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News