45 ಲಕ್ಷ ಕೋವ್ಯಾಕ್ಸಿನ್ ಡೋಸ್ ಪೂರೈಸಲು ಭಾರತ್ ಬಯೊಟೆಕ್‌ಗೆ ಕೇಂದ್ರದ ಪತ್ರ

Update: 2021-01-19 18:02 GMT

ಹೈದರಾಬಾದ್,ಜ.19: ಕೋವಿಡ್-19 ಲಸಿಕೆ ಕೋವ್ಯಾಕ್ಸಿನ್‌ನ ಇನ್ನೂ 45 ಲಕ್ಷ ಡೋಸ್‌ಗಳಿಗಾಗಿ ಕೇಂದ್ರ ಸರಕಾರದ ಪತ್ರವನ್ನು ಇಲ್ಲಿಯ ಭಾರತ್ ಬಯೊಟೆಕ್ ಸ್ವೀಕರಿಸಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಈ 45 ಲ.ಡೋಸ್‌ಗಳ ಪೈಕಿ ಎಂಟು ಲ.ಕ್ಕೂ ಅಧಿಕ ಡೋಸ್‌ಗಳನ್ನು ಮಾರಿಷಸ್,ಫಿಲಿಪ್ಪೀನ್ಸ್ ಮತ್ತು ಮ್ಯಾನ್ಮಾರ್‌ನಂತಹ ಕೆಲವು ಮಿತ್ರರಾಷ್ಟ್ರಗಳಿಗೆ ಉಚಿತವಾಗಿ ಪೂರೈಸಲಾಗುವುದು ಎಂದು ಈ ಮೂಲಗಳು ಸುದ್ದಿಸಂಸ್ಥೆಗೆ ತಿಳಿಸಿದವು.

ಆರೋಗ್ಯ ಸಚಿವಾಲಯವು ಬೇಡಿಕೆಯ ಆದೇಶಗಳನ್ನು ಸಲ್ಲಿಸಿದಾಗ ಕಂಪನಿಯು ಡೋಸ್‌ಗಳನ್ನು ರವಾನಿಸಲಿದೆ ಎಂದು ಅವು ಹೇಳಿದವು.

ಇದಕ್ಕೂ ಮುನ್ನ 55 ಲಕ್ಷ ಡೋಸ್ ಕೋವ್ಯಾಕ್ಸಿನ್‌ಗಾಗಿ ಸರಕಾರದಿಂದ ಬೇಡಿಕೆ ಆದೇಶವನ್ನು ಪಡೆದಿದ್ದ ಕಂಪನಿಯು ಮೊದಲ ಹಂತದಲ್ಲಿ ಗನ್ನಾವರಂ (ವಿಜಯವಾಡಾ),ಗುವಾಹಟಿ,ಪಾಟ್ನಾ,ದಿಲ್ಲಿ,ಕುರುಕ್ಷೇತ್ರ,ಬೆಂಗಳೂರು,ಪುಣೆ,ಭುವನೇಶ್ವರ,ಜೈಪುರ,ಚೆನ್ನೈ ಮತ್ತು ಲಕ್ನೋಗೆ ಲಸಿಕೆಗಳನ್ನು ರವಾನಿಸಿತ್ತು. ಭಾರತ್ ಬಯೊಟೆಕ್ 16.5 ಲ.ಡೋಸ್‌ಗಳನ್ನು ಭಾರತ ಸರಕಾರಕ್ಕೆ ತನ್ನ ಉಚಿತ ಕೊಡುಗೆಯಾಗಿ ನೀಡಿದೆ ಎಂದೂ ಮೂಲಗಳು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News