ಚೆನ್ನೈ ಸೂಪರ್ ಕಿಂಗ್ಸ್ ನೊಂದಿಗೆ ಹರ್ಭಜನ್ ಸಿಂಗ್ ನಂಟು ಅಂತ್ಯ

Update: 2021-01-20 11:28 GMT

ಹೊಸದಿಲ್ಲಿ: ಇಂಡಿಯನ್ ಪ್ರೀಮಿಯರ್ ಲೀಗ್( ಐಪಿಎಲ್)ಫ್ರಾಂಚೈಸಿ ಚೆನ್ನೈ ಸೂಪರ್ ಕಿಂಗ್ಸ್ ನೊಂದಿಗೆ ಹರ್ಭಜನ್ ಸಿಂಗ್ ಮಾಡಿಕೊಂಡಿದ್ದ ಗುತ್ತಿಗೆ ಅವಧಿಯು ಅಂತ್ಯವಾಗಿದ್ದು, ಭಾರತದ ಮಾಜಿ ಸ್ಪಿನ್ನರ್ ಸಿಂಗ್ ಐಪಿಎಲ್ ತಂಡಕ್ಕೆ ಶುಭಾಶಯ ಕೋರಿದ್ದಾರೆ.

"ಚೆನ್ನೈನೊಂದಿಗೆ ಆಡಿರುವ ಅನುಭವ ಅದ್ಭುತವಾದುದು.  ಆ ತಂಡದೊಂದಿಗಿನ ಸೊಗಸಾದ ಅನುಭವವು ನನಗೆ ಸದಾ ಸ್ಮರಣೀಯ. ಐಪಿಎಲ್ ನಲ್ಲಿ ಚೆನ್ನೈನೊಂದಿಗಿನ ತನ್ನ ಗುತ್ತಿಗೆ ಕೊನೆಯಾಗಿದೆ. ಕೆಲವು ಉತ್ತಮ ಗೆಳೆಯರನ್ನು ಮುಂದಿನ ಕೆಲವು ವರ್ಷಗಳ ಕಾಲ ನೆನಪಿನಲ್ಲಿಟ್ಟುಕೊಳ್ಳುವೆ. ..ಅದ್ಭುತ 2 ವರ್ಷಗಳಿಗಾಗಿ ಚೆನ್ನೈ ಫ್ರಾಂಚೈಸಿಯ ಆಡಳಿತ ವರ್ಗ, ಸಿಬ್ಬಂದಿ ಹಾಗೂ ಅಭಿಮಾನಿಗಳಿಗೆ ಧನ್ಯವಾದ ಹೇಳುವೆ… ಆ ತಂಡಕ್ಕೆ ಶುಭಾಶಯ'' ಎಂದು ಹರ್ಭಜನ್ ಟ್ವೀಟಿಸಿದ್ದಾರೆ.

"ವೈಯಕ್ತಿಕ ಕಾರಣಕ್ಕಾಗಿ ನಾನು ಈ ವರ್ಷದ ಐಪಿಎಲ್ ನಲ್ಲಿ ಆಡಿರಲಿಲ್ಲ. ಇಂದಿಗೆ(20-01-2021) ಚೆನ್ನೈನೊಂದಿಗಿನ ನನ್ನ ಗುತ್ತಿಗೆ ಅವಧಿಯು ಅಂತ್ಯವಾಗಿದೆ''ಎಂದು ಹರ್ಭಜನ್ ಟ್ವೀಟಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News