ಜಮ್ಮು: ಗಡಿ ನುಸುಳಲು ಪ್ರಯತ್ನಿಸಿದ ಮೂವರು ಶಂಕಿತ ಉಗ್ರರ ಹತ್ಯೆ

Update: 2021-01-20 17:25 GMT

ಜಮ್ಮು, ಜ. 20: ಜಮ್ಮುವಿನ ಅಖ್ನೂರ್‌ನ ಕೇರಿ ಬಟ್ಟಲ್ ಪ್ರದೇಶದ ಗಡಿ ನಿಯಂತ್ರಣ ರೇಖೆಯಲ್ಲಿ ಪ್ರಮುಖ ಒಳ ನುಸುಳುವ ಪ್ರಯತ್ನವನ್ನು ವಿಫಲಗೊಳಿಸಿರುವ ಸೇನೆ ಮೂವರು ಶಂಕಿತ ಉಗ್ರರನ್ನು ಹತ್ಯೆಗೈದಿದೆ. ಈ ಕಾರ್ಯಾಚರಣೆಯಲ್ಲಿ ನಾಲ್ವರು ಯೋಧರಿಗೆ ಗಾಯಗಳಾಗಿವೆ.

 ಐವರು ಶಸಸ್ತ್ರ ಶಂಕಿತ ಉಗ್ರರ ಗುಂಪೊಂದು ಜನವರಿ 18-19ರ ನಡುವಿನ ರಾತ್ರಿ ಕೇರಿ ಬಟ್ಟಲ್ ವಲಯದ ಮೂಲಕ ಒಳ ನುಸುಳಲು ಪ್ರಯತ್ನಿಸಿತು. ಸೇನೆ ಜಾಗೃತಗೊಂಡು ಉಗ್ರರ ಒಳ ನುಸುಳುವಿಕೆಯನ್ನು ತಡೆಯಿತು. ಈ ಸಂದರ್ಭ ಉಗ್ರರು ಹಾಗೂ ಯೋಧರ ನಡುವೆ ಗುಂಡಿನ ಚಕಮಕಿ ನಡೆಯಿತು ಎಂದು ಸೇನಾ ಮೂಲಗಳು ತಿಳಿಸಿವೆ.

ಈ ಕಾರ್ಯಾಚರಣೆಯಲ್ಲಿ ಮೂವರು ಉಗ್ರರು ಸಾವನ್ನಪ್ಪಿದ್ದಾರೆ. ಕಾರ್ಯಾಚರಣೆ ನಡೆದ ಸ್ಥಳದಿಂದ ಪರಾರಿಯಾಗಿರುವ ಅಥವಾ ಅದೇ ಪ್ರದೇಶದಲ್ಲಿ ಅಡಗಿ ಕುಳಿತಿರುವ ಸಾಧ್ಯತೆ ಇರುವ ಇತರ ಇಬ್ಬರು ಉಗ್ರರ ಶೋಧ ಕಾರ್ಯಾಚರಣೆ ಮುಂದವರಿದಿದೆ ಎಂದು ಮೂಲಗಳು ತಿಳಿಸಿವೆ.

ಉಗ್ರರ ಗುಂಡಿನ ದಾಳಿಗೆ ನಾಲ್ವರು ಯೋಧರು ಕೂಡ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News