ಫ್ರಾಂಚೈಸಿ ಕ್ರಿಕೆಟಿನಿಂದ ಲಸಿತ್ ಮಾಲಿಂಗ ನಿವೃತ್ತಿ

Update: 2021-01-20 18:02 GMT

ಮುಂಬೈ: ಶ್ರೀಲಂಕಾದ ವೇಗದ ಬೌಲರ್ ಲಸಿತ್ ಮಾಲಿಂಗ ಫ್ರಾಂಚೈಸಿ ಕ್ರಿಕೆಟ್ ನಿಂದ ನಿವೃತ್ತಿಯಾಗಿದ್ದಾರೆ ಎಂದು ಇಂಡಿಯನ್ ಪ್ರೀಮಿಯರ್ ಲೀಗ್ ತಂಡ ಮುಂಬೈ ಇಂಡಿಯನ್ಸ್ ಬುಧವಾರ ಪ್ರಕಟಿಸಿದೆ.

ಅಪಾಯಕಾರಿ ಯಾರ್ಕರ್ ಸ್ಪೆಷಲಿಸ್ಟ್ ಮಾಲಿಂಗ ಈ ತಿಂಗಳಾರಂಭದಲ್ಲಿ ತನ್ನ ನಿರ್ಧಾರವನ್ನು ಮುಂಬೈ ಇಂಡಿಯನ್ಸ್ ಗೆ ತಿಳಿಸಿದ್ದರು.

ನನ್ನ ಕುಟುಂಬದೊಂದಿಗೆ ಚರ್ಚಿಸಿದ ಬಳಿಕ ಫ್ರಾಂಚೈಸಿ ಕ್ರಿಕೆಟ್ ನಿಂದ ನಿವೃತ್ತಿಯಾಗಲು ಇದು ಸರಿಯಾದ ಸಮಯ ಎಂದು ಭಾವಿಸಿದ್ದೇನೆ. ಕೊರೋನ ಪರಿಸ್ಥಿತಿ, ಪ್ರಯಾಣದ ನಿರ್ಬಂಧವು ಫ್ರಾಂಚೈಸಿ ಕ್ರಿಕೆಟ್ ನಲ್ಲಿ ಸಂಪೂರ್ಣ ಗಮನ ನೀಡಲು ಕಷ್ಟವಾಗಿಸುತ್ತಿದೆ ಎಂದು ಹೇಳಿಕೆಯೊಂದರಲ್ಲಿ ಮಾಲಿಂಗ ತಿಳಿಸಿದ್ದಾರೆ.

ಮಾಲಿಂಗ ಹಾಲಿ ಚಾಂಪಿಯನ್ ಮುಂಬೈ ಪರ 12 ವರ್ಷಗಳ ಕಾಲ ಆಡಿದ್ದು, 122 ಪಂದ್ಯಗಳಲ್ಲಿ ಆಡಿದ್ದಾರೆ. ಮುಂಬೈ ಪರ 4 ಐಪಿಎಲ್ ಪ್ರಶಸ್ತಿ ಜಯಿಸಿದ್ದಾರೆ. ವೈಯಕ್ತಿಕ ಕಾರಣಕ್ಕೆ 2020ರ ಐಪಿಎಲ್ ನಲ್ಲಿ ಭಾಗವಹಿಸಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News