ಹವಾಮಾನ ಒಪ್ಪಂದ, ಡಬ್ಲ್ಯುಎಚ್‌ಓಗೆ ಅಮೆರಿಕ ಮರುಸೇರ್ಪಡೆ

Update: 2021-01-21 04:41 GMT

ವಾಷಿಂಗ್ಟನ್: ಅಮೆರಿಕದ 46ನೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಜೋ ಬೈಡನ್ ಅವರು ಪ್ಯಾರೀಸ್ ಹವಾಮಾನ ಒಪ್ಪಂದ ಮತ್ತು ವಿಶ್ವ ಆರೋಗ್ಯ ಸಂಸ್ಥೆಗೆ ಮರು ಸೇರ್ಪಡೆ ಸೇರಿದಂತೆ ಹಲವು ಮಹತ್ವದ ಕಾರ್ಯಾದೇಶಗಳಿಗೆ ಸಹಿ ಮಾಡಿದ್ದಾರೆ.

ಕೊರೋನ ವೈರಸ್ ಸಾಂಕ್ರಾಮಿಕ, ಜನಾಂಗೀಯ ಅಸಮಾನತೆ ಸಮಸ್ಯೆ ನಿವಾರಿಸುವ ಕುರಿತ ಕಾರ್ಯಾದೇಶಗಳಿಗೂ ಬೈಡನ್ ಬುಧವಾರ ಸಹಿ ಮಾಡಿದರು. ಇವು ಹಿಂದಿನ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್ ಅವರ ನೀತಿಗಳಿಗೆ ವಿರುದ್ಧವಾದ ನೀತಿಗಳಾಗಿವೆ.

ವಿಶ್ವದ ಅತಿಹೆಚ್ಚು ಹಸಿರುಮನೆ ಅನಿಲಗಳನ್ನು ಹೊರಸೂಸುವ ದೇಶವಾಗಿ ಅಮೆರಿಕ ಮುಂದುವರಿದಿದ್ದು, ಈ ಸಮಸ್ಯೆಯನ್ನು ಬಗೆಹರಿಸಲು ಅಗತ್ಯ ನೀತಿಗಳನ್ನು ಕೂಡಾ ನಾವು ರೂಪಿಸುವ ಅಗತ್ಯವಿದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಸಾಕಿ ಹೇಳಿದ್ದಾರೆ.

ಏತನ್ಮಧ್ಯೆ ಮಾಜಿ ಸಿಐಎ ಅಧಿಕಾರಿ ಅವ್ರಿಲ್ ಹೇನ್ಸ್ ಅವರನ್ನು ರಾಷ್ಟ್ರೀಯ ಗುಪ್ತಚರ ವಿಭಾಗದ ನಿರ್ದೇಶಕರಾಗಿ ಆಯ್ಕೆ ಮಾಡಿರುವ ಕ್ರಮವನ್ನು ಅಮೆರಿಕ ಸೆನೆಟ್ ದೃಢೀಕರಿಸಿದೆ. ಇದರೊಂದಿಗೆ ಹೇನ್ಸ್ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಜೋ ಬೈಡನ್ ಅವರ ಕ್ಯಾಬಿನೆಟ್‌ಗೆ ಸೆನೆಟ್ ಒಪ್ಪಿಗೆಯೊಂದಿಗೆ ಅಧಿಕೃತವಾಗಿ ಸೇರ್ಪಡೆಯಾದ ಮೊದಲ ಸದಸ್ಯೆ ಎನಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News