ಬೈಡನ್‍ಗೆ ಅಭಿನಂದನೆ ಸಲ್ಲಿಸುತ್ತಾ ಟ್ರಂಪ್ ವಿರುದ್ಧ ಹರಿಹಾಯ್ದ ಹಲವು ಜಾಗತಿಕ ನಾಯಕರು

Update: 2021-01-21 06:05 GMT

ಲಂಡನ್: ಅಮೆರಿಕಾದ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜೋ ಬೈಡನ್ ಅವರಿಗೆ ವಿಶ್ವ ನಾಯಕರಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.  ಈ ನಡುವೆ ಹಲವು ನಾಯಕರು ನಿರ್ಗಮನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿರುದ್ಧ ಹಾಗೂ ಅವರ ಆಡಳಿತ ಶೈಲಿಯ ವಿರುದ್ಧ ಹರಿಯಾಯ್ದಿದ್ದಾರೆ.

ಸ್ಪೇನ್ ಪ್ರಧಾನಿ ಪೆಡ್ರೋ ಸಾಂಚೆಝ್ ಅವರು ಬೈಡೆನ್ ಅವರು ಅಧಿಕಾರ ವಹಿಸಿರುವುದು ತೀವ್ರ ಬಲಪಂಥಿಯವಾದದ ವಿರುದ್ಧ ಪ್ರಜಾಪ್ರಭುತ್ವದ ಗೆಲುವನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದರು. ಜತೆಗೆ "ಐದು ವರ್ಷದ ಹಿಂದೆ  ನಾವು ಟ್ರಂಪ್ ಒಂದು ಕೆಟ್ಟ ಜೋಕ್ ಎಂದು ತಿಳಿದುಕೊಂಡಿದ್ದೆವು. ಆದರೆ ಅವರು ವಿಶ್ವದ ಅತ್ಯಂತ ಪ್ರಬಲ ಪ್ರಜಾಪ್ರಭುತ್ವವೊಂದನ್ನು ವಸ್ತುಶಃ ಹಾಳುಗೆಡಹಿದರು ಎಂದು ಐದು ವರ್ಷಗಳ ನಂತರ ನಮಗೆ  ತಿಳಿಯಿತು,'' ಎಂದಿದ್ದಾರೆ.

ಜರ್ಮನಿಯ ಅಧ್ಯಕ್ಷ ಫ್ರಾಂಕ್-ವಾಲ್ಟರ್ ಸ್ಟೀನ್ಮೀರ್ ಕೂಡ ತಮಗೀಗ "ಬಹಳಷ್ಟು ನಿರಾಳವಾಗಿದೆ'' ಎಂದಿದ್ದಾರಲ್ಲದೆ ತಮ್ಮ ದೇಶವಾಸಿಗಳಿಗೂ ಅದೇ ಭಾವನೆಯಿದೆ ಎಂದಿದ್ದಾರೆ.

"ಇಂದು ನಮಗಿರುವ ಎಲ್ಲಾ ಸಂತೋಷದ ನಡುವೆ,  ಜಗತ್ತಿನ ಅತ್ಯಂತ ಪ್ರಬಲ ಪ್ರಜಾಪ್ರಭತ್ವವನ್ನೂ ಪಾಪ್ಯುಲಿಸಂ ಮೂಲಕ ಸೆಳೆಯಲಾಯಿತು ಎಂಬುದನ್ನು ನಾವು ಮರೆಯಬಾರದು,'' ಎಂದು ಅವರು ಹೇಳಿದ್ದಾರೆ

ಅತ್ತ ಇರಾನ್ ಅಧ್ಯಕ್ಷ ಹಸನ್ ರೂಹಾನಿ ಅವರು ಡೊನಾಲ್ಡ್ ಟ್ರಂಪ್ ಯುಗದ ಅಂತ್ಯವನ್ನು ಸ್ವಾಗತಿಸುತ್ತಾ ಟೆಹ್ರಾನ್ ವಿರುದ್ಧದ  ನಿರ್ಬಂಧಗಳನ್ನು ಅಮೆರಿಕಾ ವಾಪಸ್ ಪಡೆಯಬಹುದೆನ್ನುವ ಹಾಗೂ 2015ರ ಅಣು ಒಪ್ಪಂದವನ್ನು ಒಪ್ಪಿಕೊಳ್ಳಬಹುದೆನ್ನುವ ಆಶಾವಾದ  ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News