ಲಸಿಕೆ ಅಭಿಯಾನದ ಎರಡನೇ ಹಂತದಲ್ಲಿ ಪ್ರಧಾನಿ, ಮುಖ್ಯಮಂತ್ರಿಗಳಿಗೆ ಲಸಿಕೆ: ಮೂಲಗಳು

Update: 2021-01-21 06:30 GMT

ಹೊಸದಿಲ್ಲಿ: ಕಳೆದ ವಾರ ಆರಂಭವಾಗಿರುವ ಕೋವಿಡ್-19 ಲಸಿಕೆ ಅಭಿಯಾನದ ಎರಡನೇ ಹಂತದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಎಲ್ಲ ಮುಖ್ಯಮಂತ್ರಿಗಳು ಲಸಿಕೆ ಪಡೆಯಲಿದ್ದಾರೆ ಎಂದು ಮೂಲಗಳು ಇಂದು ತಿಳಿಸಿವೆ.

ಕೊರೋನ ಪಿಡುಗಿನ ವಿರುದ್ಧ ಲಸಿಕೆ ಅಭಿಯಾನವನ್ನು ಪ್ರಧಾನಮಂತ್ರಿ ಮೋದಿ ಜನವರಿ 16ರಂದು ದೇಶಾದ್ಯಂತ ಚಾಲನೆ ನೀಡಿದ್ದರು. ಕೊರೋನ ವೈರಸ್ ವಿರುದ್ಧ ಮುಂದೆನಿಂತು ಹೋರಾಡುತ್ತಿರುವ ಆರೋಗ್ಯ ಕಾರ್ಯಕರ್ತರು ಹಾಗೂ ಇತರರು ಮೊದಲಿಗೆ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆ ನೀಡಲಾಗಿತ್ತು.

ಎರಡನೇ ಹಂತದ ಲಸಿಕೆ ಅಭಿಯಾನದಲ್ಲಿ 50 ವರ್ಷಕ್ಕಿಂತ ಮೇಲಿನ ಎಲ್ಲ ನಾಗರಿಕರಿಗೆ, 50 ವರ್ಷ ಮೇಲ್ಪಟ್ಟ ಎಲ್ಲ ಸಂಸದರು ಹಾಗೂ ಶಾಸಕರಿಗೆ ಲಸಿಕೆ ನೀಡಲಾಗುತ್ತದೆ ಎಂದು ಮೂಲಗಳು  ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News