ಕೋವಿಡ್ ಲಸಿಕೆ ತಯಾರಕ ಸಂಸ್ಥೆ ಸೀರಮ್‌ನಲ್ಲಿ ಬೆಂಕಿ ಅವಘಡ: ಐದು ಮಂದಿ ಮೃತ್ಯು

Update: 2021-01-21 12:58 GMT

ಪುಣೆ/ಹೊಸದಿಲ್ಲಿ: ಕೋವಿಡ್-19 ಲಸಿಕೆ ತಯಾರಿಕೆಯ ಸಂಸ್ಥೆ ಸೀರಮ್ ಇನ್ಸ್‌ಸ್ಟಿಟ್ಯೂಟ್‌ನಲ್ಲಿ ಗುರುವಾರ ಸಂಭವಿಸಿದ ಭಾರೀ ಅಗ್ನಿ ಅನಾಹುತದಲ್ಲಿ ಐದು ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಈ ಅವಘಡದಿಂದ ಕೋವಿಶೀಲ್ಡ್ ಉತ್ಪಾದನೆಯ ಮೇಲೆ ಯಾವುದೇ ಪರಿಣಾಮ ಉಂಟಾಗದು ಎಂದು ಸಂಸ್ಥೆ ತಿಳಿಸಿದೆ.

ಬೆಂಕಿ ಕಾಣಿಸಿಕೊಂಡಿರುವ ಕಟ್ಟಡದೊಳಗೆ ಸಿಲುಕಿರುವ ಜನರನ್ನು ರಕ್ಷಿಸಲಾಗುತ್ತಿದೆ.

‘‘ಘಟನೆಯಿಂದ ಕೆಲವರ ಜೀವ ಹಾನಿಯಾಗಿದೆ. ಮೃತಪಟ್ಟಿರುವ ಕುಟುಂಬ ಸದಸ್ಯರಿಗೆ ನಾವು ಸಂತಾಪ ವ್ಯಕ್ತಪಡಿಸುತ್ತೇವೆ ಎಂದು ಸೀರಮ್ ಸಂಸ್ಥೆಯ ಸಿಇಒ ಆದಾರ್ ಪೂನಾವಾಲಾ ಟ್ವೀಟಿಸಿದ್ದಾರೆ.

ಬೆಂಕಿಯನ್ನು ನಿಯಂತ್ರಿಸಲು ಅಗ್ನಿಶಾಮಕ ದಳಕ್ಕೆ ಸುಮಾರು ಮೂರು ಗಂಟೆ ತಗಲಿದೆ. ಬೆಂಕಿ ಹತ್ತಿಕೊಳ್ಳಲು ಕಾರಣ ಏನೆಂದು ಇನ್ನೂ ಗೊತ್ತಾಗಿಲ್ಲ ಎಂದು ಅಗ್ನಿಶಾಮಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News