ರಾಜಸ್ಥಾನ: ಲಸಿಕೆ ಪಡೆದು 5 ದಿನಗಳ ಬಳಿಕ ಮೃತಪಟ್ಟ ಸಹಾಯಕ ಆಡಳಿತಾಧಿಕಾರಿ

Update: 2021-01-22 07:10 GMT

ಜೈಪುರ: ಸಹಾಯಕ ಆಡಳಿತಾಧಿಕಾರಿ ಸುರೇಶ್ ಚಂದ್ರ ಶರ್ಮಾ ಕೊರೋನ ಲಸಿಕೆ ಸ್ವೀಕರಿಸಿದ ಐದು ದಿನಗಳ ಬಳಿಕ ಜನವರಿ 21ರಂದು ರಾಜಸ್ಥಾನದ ಉದಯಪುರ ಜಿಲ್ಲೆಯ ಗೀತಾಂಜಲಿ ವೈದ್ಯಕೀಯ ಕಾಲೇಜಿನಲ್ಲಿ ನಿಧನರಾದರು. 

ಅಧಿಕ ರಕ್ತದೊತ್ತಡ ಹಾಗೂ ದೀರ್ಘಕಾಲದ ಮೂತ್ರಪಿಂಡದ ಕಾಯಿಲೆಯಿಂದಾಗಿ ಉಂಟಾದ ಗಂಭೀರ ಮೆದುಳಿನ ರಕ್ತಸ್ರಾವದಿಂದಾಗಿ ಸುರೇಶ್ ಚಂದ್ರ ಶರ್ಮಾ ನಿಧನರಾಗಿದ್ದಾರೆ. ಕೋವಿಡ್-19 ಲಸಿಕೆಗೂ, ಈ ಸಾವಿಗೂ ಸಂಬಂಧವಿಲ್ಲ ಎಂದು ಚಿತ್ತೋರ್ ಗಢ ಮುಖ್ಯ ವೈದ್ಯಕೀಯ ಹಾಗೂ ಆರೋಗ್ಯ ಅಧಿಕಾರಿ ಸಹಿ ಮಾಡಿರುವ ಪ್ರಕಟನೆಯೊಂದರಲ್ಲಿ ತಿಳಿಸಲಾಗಿದೆ.

ಕೋವಿಡ್-19 ವಿರುದ್ಧ ಲಸಿಕೆಯ ನಂತರ ಉಂಟಾಗುವ ಅಡ್ಡಪರಿಣಾಮಗಳ ಬಗ್ಗೆ ತನಿಖೆ ಮಾಡುವ ರೋಗ ನಿರೋಧಕ ಸಮಿತಿಯು(ಎಇಎಫ್ ಐ)ಶರ್ಮಾ ನಿಧನಕ್ಕೆ ಲಸಿಕೆ ಕಾರಣವಲ್ಲ.ಶರ್ಮಾ ಅಧಿಕ ರತ್ತದೊತ್ತಡದಿಂದ ಬಳಲುತ್ತಿದ್ದು, ದೀರ್ಘ ಸಮಯದಿಂದ ಮೂತ್ರಪಿಂಡದ ಕಾಯಿಲೆಯೂ ಇತ್ತು. ಇದು ಮಿದುಳಿನ ರಕ್ತಸ್ರಾವಕ್ಕೆ ಕಾರಣವಾಯಿತು ಎಂದು ಸಮಿತಿ ತೀರ್ಮಾನಿಸಿದೆ. 

ಜನವರಿ 16ರಿಂದ ಮೊದಲ ಹಂತದ ಲಸಿಕೆ ಅಭಿಯಾನ ಆರಂಭವಾದ ಬಳಿಕ ರಾಜಸ್ಥಾನದಲ್ಲಿ ಅಡ್ಡಪರಿಣಾಮದ 44 ಪ್ರಕರಣಗಳು ವರದಿಯಾಗಿದೆ ಎಂದು ರಾಜಸ್ಥಾನ ಆರೋಗ್ಯ ಇಲಾಖೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News