ಸಾಮಾಜಿಕ ಜಾಲತಾಣದಲ್ಲಿ ಬಿಹಾರ ಸರಕಾರವನ್ನು ಟೀಕಿಸುವವರಿಗೆ ಶಿಕ್ಷೆ: ಮೊದಲು ನನ್ನನ್ನೇ ಬಂಧಿಸಿ ಎಂದ ತೇಜಸ್ವಿ

Update: 2021-01-22 16:42 GMT

ಪಾಟ್ನಾ,ಜ.22: ಸಾಮಾಜಿಕ ಮಾಧ್ಯಮಗಳಲ್ಲಿನ ಪೋಸ್ಟ್‌ಗಳಿಗೆ ಸಂಬಂಧಿಸಿದ ನೂತನ ಆದೇಶದಡಿ ತನ್ನನ್ನು ಬಂಧಿಸುವಂತೆ ಬಿಹಾರದ ಪ್ರತಿಪಕ್ಷ ನಾಯಕ ತೇಜಸ್ವಿ ಯಾದವ್ ಅವರು ಶುಕ್ರವಾರ ನಿತೀಶ್ ಕುಮಾರ್ ಸರಕಾರಕ್ಕೆ ಸವಾಲೆಸೆದಿದ್ದಾರೆ. ಸಚಿವರು,ಸಂಸದರು,ಶಾಸಕರು ಮತ್ತು ಇತರ ಅಧಿಕಾರಿಗಳ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಮಾನಹಾನಿಕರ ಪೋಸ್ಟ್‌ಗಳನ್ನು ಸೈಬರ್ ಅಪರಾಧಗಳ ವ್ಯಾಪ್ತಿಗೆ ಸೇರಿಸಲು ಬಿಹಾರ ಸರಕಾರವು ಗುರುವಾರ ನಿರ್ಧರಿಸಿತ್ತು.

‘60 ಹಗರಣಗಳ ಸರದಾರ,ಭ್ರಷ್ಟಾಚಾರದ ಭೀಷ್ಮ ಪಿತಾಮಹ,ಕ್ರಿಮಿನಲ್‌ಗಳ ರಕ್ಷಕ,ಅನೈತಿಕ ಮತ್ತು ಅಸಾಂವಿಧಾನಿಕ ಸರಕಾರದ ದುರ್ಬಲ ನಾಯಕ ನಿತೀಶ್ ಕುಮಾರ್ ’ಎಂದು ಟ್ವೀಟಿಸಿರುವ ಯಾದವ್, ‘ಬಿಹಾರ ಪೊಲೀಸರು ಮದ್ಯವನ್ನು ಮಾರಾಟ ಮಾಡುತ್ತಿದ್ದಾರೆ. ನೂತನ ಆದೇಶದಡಿ ನನ್ನನ್ನು ಬಂಧಿಸುವಂತೆ ಮುಖ್ಯಮಂತ್ರಿಗಳಿಗೆ ಸವಾಲೊಡ್ಡುತ್ತಿದ್ದೇನೆ ’ಎಂದೂ ಹೇಳಿದ್ದಾರೆ.

ನಿತೀಶರನ್ನು ಅಡಾಲ್ಫ್ ಹಿಟ್ಲರ್‌ಗೆ ಹೋಲಿಸಿರುವ ಯಾದವ್, ಪ್ರತಿಭಟನಾಕಾರರು ಪ್ರತಿಭಟಿಸುವಂತಿಲ್ಲ. ಸರಕಾರದ ವಿರುದ್ಧ ಬರೆದವರನ್ನು ಜೈಲಿಗೆ ತಳ್ಳಲಾಗುತ್ತಿದೆ. ಪ್ರತಿಪಕ್ಷ ನಾಯಕರಿಗೆ ದೂರು ಸಲ್ಲಿಸಲೂ ಜನರಿಗೆ ಅವಕಾಶ ನೀಡಲಾಗುತ್ತಿಲ್ಲ. ನಿತೀಶ್‌ಜಿ,ನೀವು ತುಂಬಾ ದಣಿದಿದ್ದೀರಿ ಎನ್ನುವುದು ನಮಗೆ ಗೊತ್ತು,ಆದರೆ ಸ್ವಲ್ಪವಾದರೂ ಮರ್ಯಾದೆ ಇಟ್ಟುಕೊಳ್ಳಿ ’ಎಂದು ಟ್ವೀಟ್‌ನಲ್ಲಿ ಕುಟುಕಿದ್ದಾರೆ.

 ಸಾಮಾಜಿಕ ಮಾಧ್ಯಮಗಳಲ್ಲಿ ಮಾನಹಾನಿಕರ ಪೋಸ್ಟ್‌ಗಳನ್ನು ಮಾಡುವವರ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳುವುದು ಸರಿಯಾಗಿಯೇ ಇದೆ ಎಂದು ಸರಕಾರದ ಕಾರ್ಯದರ್ಶಿಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿರುವ ಆರ್ಥಿಕ ಅಪರಾಧಗಳ ಘಟಕ (ಇಎಸ್‌ಡಬ್ಲ್ಯು)ದ ಮುಖ್ಯಸ್ಥ ಐಜಿಪಿ ನಯ್ಯ್‌ರ್ ಹಸ್ನೈನ್ ಖಾನ್ ಅವರು,ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತಾಗಲು ಇಂತಹ ಘಟನೆಗಳನ್ನು ಇಎಸ್‌ಜಿ ಗಮನಕ್ಕೆ ತರುವಂತೆ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News