ಜ.25ರಂದು ಭಟ್ಕಳ ಮಿನಿ ವಿಧಾನಸೌಧ ಕಟ್ಟಡ ಉದ್ಘಾಟನೆ

Update: 2021-01-22 17:04 GMT

ಭಟ್ಕಳ : ಸುಮಾರು 13.15ಕೋಟಿ ರೂ. ವೆಚ್ಚದಲ್ಲಿ ನಿಮಾರ್ಣಗೊಂಡ ಇಲ್ಲಿನ ಮಿನಿ ವಿಧಾನಸೌಧ ಕಟ್ಟಡಕ್ಕೆ ಕೊನೆಗೂ ಉದ್ಘಾಟನೆಯ ಭಾಗ್ಯ ಲಭಿಸಿದ್ದು ಜ.25ಕ್ಕೆ ಕಂದಾಯ ಸಚಿವ ಆರ್.ಅಶೋಕ ಉದ್ಘಾಟಿಸಲಿದ್ದಾರೆ ಎಂದು ತಿಳಿದುಬಂದಿದೆ. 

ಈ ಕುರಿತಂತೆ ಶಾಸಕ ಸುನಿಲ್ ನಾಯ್ಕ  ಭಟ್ಕಳ ಸಹಾಯಕ ಆಯುಕ್ತ ಭರತ್, ತಹಸೀಲ್ದಾರ ಎಸ್.ರವಿಚಂದ್ರ ಮತ್ತಿತರ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು ಎನ್ನಲಾಗಿದೆ.

ಮಿನಿವಿಧಾನಸೌಧ ಕಟ್ಟಡ ಸಂಪೂರ್ಣಗೊಂಡು ಒಂದು ವರ್ಷ ಕಳೆದರೂ ಕೋವಿಡ್ 19 ಲಾಕ್ಡೌನ್ ನಿಂದಾಗಿ ಉದ್ಘಾಟನೆ ವಿಳಂಬಗೊಂಡಿತ್ತು.  ಸರಿಸುಮಾರು 13.15ಕೋ. ರೂ. ವೆಚದ ಈ ಬೃಹತ್ ಭಟ್ಕಳ ಮಿನಿ ವಿಧಾನಸೌಧ ನಿರ್ಮಾಣ ಯೋಜನೆಯನ್ನು ಈ ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳು ಹಾಗೂ ಮಂಕಾಳು ವೈದ್ಯ ಭಟ್ಕಳದ ಶಾಸಕರಾಗಿದ್ದ ಕಾಲದಲ್ಲಿಯೇ ಕೈಗೆತ್ತಿಕೊಳ್ಳಲಾಗಿತ್ತು.

ಭಟ್ಕಳದಲ್ಲಿ ಅಭಿವೃದ್ಧಿ ಕಾಂರ್ಯಕ್ಕೆ ಮೊದಲ ಆದ್ಯತೆಯನ್ನು ನೀಡಲಾಗಿದೆ. ಅಭಿವೃದ್ಧಿಯ ವಿಷಯದಲ್ಲಿ ಯಾವುದೇ ರೀತಿಯ ರಾಜಕಾರಣವನ್ನು ನಾನು ಒಪ್ಪುವುದಿಲ್ಲ,  ಮಿನಿ ವಿಧಾನಸೌಧ ಕಟ್ಟಡಕ್ಕೆ ಬೇಕಾದ ಪೀಠೋಕರಣಗಳನ್ನು ಒದಗಿಸಲು ಪ್ರಯತ್ನ ನಡೆದಿದೆ ಎಂದು ಶಾಸಕ ಸುನಿಲ್ ನಾಯ್ಕ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News