ಜೆಎನ್ ಯು ಉಪ ಕುಲಪತಿ ಜಗದೀಶ್ ಎಂ.ಕುಮಾರ್ ಅವಧಿ ವಿಸ್ತರಣೆ

Update: 2021-01-22 18:02 GMT

ಹೊಸದಿಲ್ಲಿ: ಜೆಎನ್ ಯು ಉಪ ಕುಲಪತಿ ಜಗದೀಶ್ ಎಂ.ಕುಮಾರ್ ಅವರ ಅವಧಿಯನ್ನು ಕೇಂದ್ರ ಸರಕಾರವು ಶುಕ್ರವಾರ ರಾತ್ರಿ ವಿಸ್ತರಿಸಿದೆ.

ಜಗದೀಶ್ ಕುಮಾರ್ ಅವರು ಕಳೆದ ವರ್ಷ ಜೆಎನ್ ಯು ಕ್ಯಾಂಪಸ್ ಲ್ಲಿ  ಬೋಧಕ ವರ್ಗ ಹಾಗೂ ವಿದ್ಯಾರ್ಥಿಗಳ ಮೇಲೆ ನಡೆದ ಭೀಕರ ದಾಳಿಯ ಸಂದರ್ಭ ಯಾವುದೇ ರೀತಿಯ ಕ್ರಮ ಕೈಗೊಂಡಿರಲಿಲ್ಲ. ಈ ದಾಳಿಯಲ್ಲಿ 12 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.  ಈ ಹಿನ್ನೆಲೆಯಲ್ಲಿ ಜಗದೀಶ್ ಅವರನ್ನು ಉಪ ಕುಲಪತಿ ಸ್ಥಾನದಿಂದ ಅಮಾನತುಗೊಳಿಸುವಂತೆ ಆಗ್ರಹ ಕೇಳಿಬಂದಿತ್ತು.

ಕುಮಾರ್ ಜನವರಿ 26 ರಂದು ತನ್ನ 5 ವರ್ಷಗಳ ಅವಧಿಯನ್ನು ಪೂರ್ಣಗೊಳಿಸಲಿದ್ದಾರೆ. ಕುಮಾರ್ ಉತ್ತರಾಧಿಕಾರಿಯ ಆಯ್ಕೆಯಾಗುವ ತನಕ ಉಪ ಕುಲಪತಿಯಾಗಿ ಮುಂದುವರಿಯಲಿದ್ದಾರೆ ಎಂದು ತಡರಾತ್ರಿ ಉನ್ನತ ಶಿಕ್ಷಣ ಇಲಾಖೆ ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಿದೆ.

ಕಳೆದ ವರ್ಷ ಜನವರಿ 5ರಂದು 70ರಿಂದ 100ರಷ್ಟಿದ್ದ ಮುಸುಕುಧಾರಿ ವ್ಯಕ್ತಿಗಳು ದಿಲ್ಲಿ ಕ್ಯಾಂಪಸ್ ನೊಳಗೆ ಕಬ್ಬಿಣದ ರಾಡ್, ಒಡೆದ ಬಾಟಲಿಗಳು ಹಾಗೂ ದೊಡ್ಡ ಕಲ್ಲುಗಳನ್ನು ಹಿಡಿದುಕೊಂಡು ದಾಳಿ ನಡೆಸಿದ್ದರು. ಮೂರು ಗಂಟೆಗಳ ಕಾಲ ನಡೆಸಿರುವ ದಾಂಧಲೆಯಲ್ಲಿ ಹಿರಿಯ ಬೋಧಕ ವರ್ಗ ಸಹಿತ 34 ಜನರು ಗಾಯಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News