ಜ.29ರಿಂದ ಮೂಡುಬಿದಿರೆಯಲ್ಲಿ 'ಮಹಿಳಾ ಯಕ್ಷ ಸಂಭ್ರಮ-2021'

Update: 2021-01-23 07:27 GMT

ಮೂಡುಬಿದಿರೆ : ಕರ್ನಾಟಕ ಸರಕಾರ ಕರ್ನಾಟಕ ಯಕ್ಷಗಾನ ಅಕಾಡೆಮಿ, ಬೆಂಗಳೂರು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡುಬಿದಿರೆ ಇವರ ಸಹಯೋಗದೊಂದಿಗೆ ಮೂಡುಬಿದಿರೆ ಆಳ್ವಾಸ್ ವಿದ್ಯಾಗಿರಿಯ ಕುವೆಂಪು ಸಭಾಂಗಣದಲ್ಲಿ ಜ.29 ಮತ್ತು 30 ರಂದು ಮಹಿಳಾ ಯಕ್ಷ ಸಂಭ್ರಮ – 2021 ನಡೆಯಲಿದೆ. 

ಜ. 29 ರಂದು ಅಪರಾಹ್ನ 2 ರಿಂದ 3 ರವರೆಗೆ ಶ್ರೀ ದುರ್ಗಾಂಬಿಕಾ ಮಹಿಳಾ ಚೆಂಡೆ ಬಳಗ, ಕಡೇಕಾರ್ ಉಡುಪಿ ಇವರಿಂದ "ಚೆಂಡೆಯ ಕಲರವ"  ದೊಂದಿಗೆ ಸಭಾ ಪೂರ್ವ ಕಲಾಪಗಳು ನಡೆಯಲಿದ್ದು,  ಸಂಜೆ 3ರಿಂದ 4 ರವರೆಗೆ ಶ್ರೀ ದುರ್ಗಾ ಮಕ್ಕಳ ಮೇಳ ಕಟೀಲು ಇವರಿಂದ "ಪೂರ್ವರಂಗ" ಪ್ರದರ್ಶನವಿದೆ.

ಸಂಜೆ 4.30ರಿಂದ 6 ರವರೆಗೆ ಮಹಿಳಾ ಯಕ್ಷ ಸಂಭ್ರಮ 2021ರ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇದರ ಅಧ್ಯಕ್ಷರಾದ ಪ್ರೊ.ಎಂ.ಎ.ಹೆಗಡೆ ಅಧ್ಯಕ್ಷತೆಯನ್ನು ವಹಿಸಲಿದ್ದು, ಸಚಿವ ಕೋಟ ಶ್ರೀನಿವಾಸ ಪೂಜಾರಿ ಕಾರ್ಯಕ್ರಮದ ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಪ್ರೊ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಕುಲಪತಿಗಳು, ಮಂಗಳೂರು ವಿಶ್ವವಿದ್ಯಾನಿಲಯ, ಡಾ.ಎಂ.ಮೋಹನ ಆಳ್ವ ಅಧ್ಯಕ್ಷರು, ಆಳ್ವಾಸ್ ಎಜುಕೇಶನ್ ಟ್ರಸ್ಟ್, ಮೂಡುಬಿದಿರೆ, ಶ್ರೀಹರಿನಾರಾಯಣದಾಸ ಆಸ್ರಣ್ಣ ಅನುವಂಶಿಕ ಅರ್ಚಕರು, ಶ್ರೀ ಕ್ಷೇತ್ರ ಕಟೀಲು ಹಾಗೂ ಶ್ರೀಪತಿ ಭಟ್ ಮೂಡುಬಿದಿರೆ ಉದ್ಯಮಿ, ಯಕ್ಷಗಾನ ಕಲಾಪೋಷಕರು ಭಾಗವಹಿಸಲಿರುವರು.

ಸಂಜೆ 6.15ರಿಂದ 7.30ರವರೆಗೆ ಶ್ರೀ.ಎ.ಎನ್ .ತಿಮ್ಮಯ್ಯ ಮತ್ತು ತಂಡ, ಅರಳಗುಪ್ಪೆ, ತುಮಕೂರು ಜಿಲ್ಲೆ ಇವರಿಂದ “ರತಿ ಕಲ್ಯಾಣ” ಮೂಡಲಪಾಯ ಯಕ್ಷಗಾನ ನಡೆಯಲಿದೆ. 7.30 ರಿಂದ 9 ರವರೆಗೆ ಸುಮುಖ ಕಲಾಕೇಂದ್ರ, ಹಳೇ ತೀರ್ಥಹಳ್ಳಿ ರಸ್ತೆ ಶಿವಮೊಗ್ಗ ಇವರಿಂದ “ಭೌಮಾಸುರ ಕಾಳಗ” ಎಂಬ ಬಡಗು ಯಕ್ಷಗಾನ ನಡೆಯಲಿದೆ.  9ರಿಂದ 9.30ರವರೆಗೆ ಆಳ್ವಾಸ್ ಧೀಂಕಿಟ ತಂಡ, ಆಳ್ವಾಸ್ ಕಾಲೇಜು ಮೂಡುಬಿದಿರೆ ಇವರಿಂದ “ಯಕ್ಷರೂಪಕ” ಪ್ರಸ್ತುತಿ ಇದೆ.

ಜ.30 ರಂದು ಪೂರ್ವಾಹ್ನ 10ರಿಂದ 11.30ರವರೆಗೆ ಕಾರ್ಕಳ ಶ್ರೀ ಅನಂತಶಯನ ಯಕ್ಷ ಮಂಡಳಿಯಿಂದ "ತುಳುನಾಡ ಸಿರಿ " ಎಂಬ ತುಳು ತಾಳಮದ್ದಳೆ ನಡೆಯಲಿದೆ. ಪೂರ್ವಾಹ್ನ 11.30ರಿಂದ 1 ರವರೆಗೆ "ವಿಚಾರಗೋಷ್ಠಿ " ನಡೆಯಲಿದೆ.

“ಮೂಡಲಪಾಯ ಯಕ್ಷಗಾನ ಮತ್ತು ಮಹಿಳೆ” ಎಂಬ ವಿಷಯದಲ್ಲಿ ಡಾ.ಎಚ್ .ಆರ್. ಚೇತನಾ ಮೈಸೂರು. ಮುಖ್ಯಸ್ಥರು, ಜಾನಪದ ವಿಭಾಗ , ಮಹಾರಾಜ ಕಾಲೇಜು, ಮೈಸೂರು ವಿಶ್ವವಿದ್ಯಾಲಯ, “ಯಕ್ಷಗಾನ-ಸ್ತ್ರೀ ಅಭಿವ್ಯಕ್ತಿಯ ಹೊಸ ಸಾಧ್ಯತೆಗಳು”- ಡಾ.ಶುಭಾ ಮರವಂತೆ, ಮುಖ್ಯಸ್ಥರು ಕನ್ನಡ ವಿಭಾಗ, ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು, ಶಿವಮೊಗ್ಗ ; “ ಮಹಿಳೆ ಮತ್ತು ತಾಳಮದ್ದಳೆ ಸಂಘಟನೆ”- ಶ್ರೀಮತಿ ಕೆ.ಜಯಲಕ್ಷ್ಮೀ ಕಾರಂತ ಶಿಕ್ಷಕಿ, ತಾಳಮದ್ದಳೆ ಸಂಘಟಕಿ ಹಾಗೂ “ಯಕ್ಷಗಾನ ಮತ್ತು ಮಹಿಳೆ ”-ಶ್ರೀಮತಿ ಸಾಯಿಸುಮ ಎಂ.ನಾವಡ ಉಪನ್ಯಾಸಕಿ ಹಾಗೂ ಯಕ್ಷಗಾನ ಕಲಾವಿದೆ ಇವರಿಂದ ಚಂತನ ಮಂಥನ  ನಡೆಯಲಿದೆ ಹಾಗು ಇತರ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಡಾ.ಎಂ.ಮೋಹನ ಆಳ್ವ, ಕದ್ರಿ ನವನೀತ ಶೆಟ್ಟಿ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News