ಅತ್ಯಾಚಾರ ಪ್ರಕರಣ : ಆರೋಪಿ ಸೆರೆ

Update: 2021-01-23 10:13 GMT

ಉಳ್ಳಾಲ : ಇಬ್ಬರು ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಸಿದ್ದೀಕ್ ಉಳ್ಳಾಲ ಎಂಬಾತನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

ಉಳ್ಳಾಲದ ಒಂಭತ್ತುಕೆರೆ ನಿವಾಸಿ ಮಹಿಳೆ ತನ್ನ ಇಬ್ಬರು ಪುತ್ರಿಯರಿಗೆ ಸಿದ್ದೀಕ್ ಕಿರುಕುಳ ನೀಡಿದ್ದ ಎಂದು ದೂರು ನೀಡಿದ್ದರು. ಈ ದೂರಿನ ಮೇರೆಗೆ ಆರೋಪಿಯ ವಿರುದ್ಧ ಅತ್ಯಾಚಾರ, ಪೋಕ್ಸೊ ಪ್ರಕರಣ ದಾಖಲಾಗಿತ್ತು. ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿರುವುದಾಗಿ ಉಳ್ಳಾಲ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News