ವುಹಾನ್ ಲಾಕ್‌ಡೌನ್ ಆರಂಭಕ್ಕೆ ವರ್ಷ: ಅಸಾಧಾರಣ ಚೇತರಿಕೆ ಕಂಡ ನಗರ

Update: 2021-01-23 17:46 GMT

ವುಹಾನ್ (ಚೀನಾ), ಜ. 23: ಕೊರೋನ ವೈರಸ್‌ನ ಹರಡುವಿಕೆಯನ್ನು ತಡೆಯುವುದಕ್ಕಾಗಿ ಚೀನಾವು ವುಹಾನ್ ನಗರದಲ್ಲಿ ವಿಧಿಸಿದ 76 ದಿನಗಳ ಲಾಕ್‌ಡೌನ್‌ನ ಆರಂಭಕ್ಕೆ ಶನಿವಾರ ಒಂದು ವರ್ಷ ತುಂಬಿದೆ.

 ಅದಾದ ಒಂದು ವರ್ಷದ ಬಳಿಕ ವುಹಾನ್ ನಗರದಲ್ಲಿ ವಾಹನ ಸಂಚಾರ ದಟ್ಟೈಸಿದೆ, ಪಾದಚಾರಿ ದಾರಿ ಗಿಜಿಗಿಡುತ್ತಿದೆ ಹಾಗೂ ಉದ್ಯಾನಗಳು ಮತ್ತು ಸರಕಾರಿ ಸಾರಿಗೆಗಳಲ್ಲಿ ಜನರು ತುಂಬಿ ತುಳುಕುತ್ತಿದ್ದಾರೆ. ಇದು 1.1 ಕೋಟಿ ಜನಸಂಖ್ಯೆಯ ನಗರವೊಂದು ಲಾಕ್‌ಡೌನ್ ಬಳಿಕ ಯಾವ ಮಟ್ಟದಲ್ಲಿ ಚೇತರಿಸಿಕೊಂಡಿತು ಎನ್ನುವುದನ್ನು ತೋರಿಸುತ್ತದೆ.

ಮೊದಲು ವುಹಾನ್‌ನಲ್ಲಿ ಕಾಣಿಸಿಕೊಂಡ ಕೊರೋನ ವೈರಸ್ ಬಳಿಕ ವಿಶ್ವವ್ಯಾಪಿಯಾಯಿತು.

ಸಾಂಕ್ರಾಮಿಕದ ಮೂಲವನ್ನು ಪತ್ತೆಹಚ್ಚಲು ಹೊರಟಿರುವ ವಿಶ್ವ ಆರೋಗ್ಯ ಸಂಸ್ಥೆಯ ಪರಿಣತರ ತಂಡವು ಈಗಲೂ ಹೊಟೇಲೊಂದರಲ್ಲಿ ಕ್ವಾರಂಟೈನ್‌ನಲ್ಲಿದೆ. ಅದು ಇನ್ನಷ್ಟೇ ತನ್ನ ಕ್ಷೇತ್ರ ತನಿಖೆಯನ್ನು ಕೈಗೆತ್ತಿಕೊಳ್ಳಬೇಕಾಗಿದೆ.

‘‘ಸಾಂಕ್ರಾಮಿಕಕ್ಕೆ ಸಂಬಂಧಿಸಿದ ಎಲ್ಲ ಸಿದ್ಧಾಂತಗಳು ಪರಿಶೀಲನೆಯಲ್ಲಿವೆ’’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಪರಿಸ್ಥಿತಿ ನಿರ್ದೇಶಕ ಮೈಕಲ್ ರಯಾನ್ ಜಿನೀವದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News