ಕೊಟ್ಟಾರದಲ್ಲಿ ಕೈಲಾಶ್ ವಸತಿ ಸಮುಚ್ಚಯಕ್ಕೆ ಶೀಘ್ರ ಶಿಲಾನ್ಯಾಸ

Update: 2021-01-23 18:09 GMT

►ಕೇವಲ 50 ಲಕ್ಷ ರೂ. ಹೈಲಿವಿಂಗ್ ಸೌಲಭ್ಯಗಳುಳ್ಳ ಅಪಾರ್ಟ್‌ಮೆಂಟ್

ಮಂಗಳೂರು, ಜ.23: ಮಂಗಳೂರಿನಲ್ಲಿ ಐಶಾರಾಮಿ ಮನೆಗಳನ್ನು ಕೈಗೆಟುಕುವ ದರದಲ್ಲಿ ನಿರ್ಮಿಸುವ ಸಂಸ್ಥೆ ನಿರ್ಮಾಣ್ ಹೋಮ್ಸ್ ಇದೀಗ ನಗರದ ಜನತೆಗೆ ಮಿತ ದರದಲ್ಲಿ ಸಕಲ ಸೌಕರ್ಯಗಳನ್ನೊಳಗೊಂಡ ಅಪಾರ್ಟ್ ಮೆಂಟ್‌ಗಳನ್ನು ನೀಡಬೇಕೆನ್ನುವ ನಿಟ್ಟಿನಲ್ಲಿ ಭಾರ್ಗವಿ ಬಿಲ್ಡರ್ಸ್‌ನ ಸಹಭಾಗಿತ್ವದಲ್ಲಿ ‘ಕೈಲಾಶ್’ ವಸತಿ ಸಮುಚ್ಚಯವನ್ನು ಶೀಘ್ರದಲ್ಲೇ ಕೊಟ್ಟಾರದಲ್ಲಿ ನಿರ್ಮಿಸಲಿದೆ.

ನಿರ್ಮಾಣ್ ಹೋಮ್ಸ್ ಸಂಸ್ಥೆಯು ‘ಎಫರ್ಡೇಬಲ್ ಲಕ್ಸುರಿ’ ಎಂಬ ಧ್ಯೇಯವನ್ನು ಹೊಂದಿದ್ದರೆ, ಭಾರ್ಗವಿ ಬಿಲ್ಡರ್ಸ್‌ ಸಂಸ್ಥೆಯು ಹೈ ಲಿವಿಂಗ್ ಲಕ್ಸುರಿ ಹೋಮ್ಸ್ ಅನ್ನು ಕೈಗೆಟುಕುವ ಬೆಲೆಯಲ್ಲಿ ಜನತೆಗೆ ನೀಡುವ ಧ್ಯೇಯವನ್ನು ಹೊಂದಿದೆ.

ಭಾರ್ಗವಿ ಬಿಲ್ಡರ್ಸ್‌ ಸಂಸ್ಥೆಯು ಶೀಘ್ರದಲ್ಲೇ ಕೊಟ್ಟಾರದಲ್ಲಿ ಕೈಲಾಶ್ ವಸತಿ ಸಮುಚ್ಚಯಕ್ಕೆ ಶಿಲಾನ್ಯಾಸ ನೆರವೇರಿಸಲಿದೆ. ಈ ಅಪಾರ್ಟ್ ಮೆಂಟ್‌ನಲ್ಲಿ ಉತ್ತಮ ಗುಣಮಟ್ಟದ ಸೌಕರ್ಯಗಳು ಲಭ್ಯವಾಗಲಿವೆ. ಈ ಅಪಾರ್ಟ್‌ಮೆಂಟ್‌ನ ವಿಶೇಷತೆಯೆಂದರೆ ನಗರದಲ್ಲೇ ಪ್ರಪ್ರಥಮ ಬಾರಿಗೆ ಕಟ್ಟಡದ ತುದಿಯಲ್ಲಿ ಈಜುಕೊಳವನ್ನು ನಿರ್ಮಿಸಲಾಗುತ್ತಿದೆ. ನಿರ್ಮಾಣ ಮತ್ತು ಸೌಕರ್ಯ ಕಲ್ಪಿಸುವ ವಿಷಯದಲ್ಲಿ ಉತ್ತಮ ಹೆಸರು ಪಡೆದಿರುವ ಸಂಸ್ಥೆ 15 ಅಂತಸ್ತುಗಳನ್ನೊಳಗೊಂಡ 131 ಮನೆಗಳನ್ನು ವಾಸ್ತು ಪ್ರಕಾರದಲ್ಲಿ ನಿರ್ಮಿಸಲಿದೆ. ಪ್ರಿಲಾಂಚ್ ಆಫರ್ ಆಗಿ 2ಬಿಎಚ್‌ಕೆ ಫ್ಲ್ಯಾಟ್ ಕೇವಲ 50 ಲಕ್ಷ ರೂ.ಗೆ ಎಲ್ಲ ಸೌಕರ್ಯಗಳೊಂದಿಗೆ ಲಭ್ಯವಾಗಲಿದೆ.

ಈವರೆಗೆ ಐದು ವಸತಿ ಯೋಜನೆಗಳನ್ನು ಮತ್ತು ಒಂದು ವಾಣಿಜ್ಯ ಯೋಜನೆಗಳನ್ನು ಸರಿಯಾದ ಸಮಯಕ್ಕೆ ಮುಕ್ತಾಯಗೊಳಿಸಿದ ಈ ಸಂಸ್ಥೆಯ ಕೈಯಲ್ಲಿ ಈಗ ನಾಲ್ಕು ಯೋಜನೆಗಳು ಕಾರ್ಯಗತಿಯಲ್ಲಿವೆ. ಮಣ್ಣಗುಡ್ಡದಲ್ಲಿ ‘ಗೋಕುಲ್‌ಧಾಮ್’, ಕೊಟ್ಟಾರ ಚೌಕಿಯಲ್ಲ್ಲಿ ‘ಕೈಲಾಶ್’, ಕಾಪಿಕಾಡ್‌ನಲ್ಲಿ ‘ಅಜಂತಾ ಬ್ಯುಝಿನೆಸ್ ಸೆಂಟರ್’ ಮತ್ತು ದೇರೆಬೈಲ್‌ನಲ್ಲಿ ‘ಮಥುರಾ’ ಎಂಬ ವಸತಿ ಯೋಜನೆಯ ಕೆಲಸ ಮುಂದುವರಿಯುತ್ತಿದೆ. ಇದೀಗ ಕೈಲಾಶ್ ಅಪಾರ್ಟ್ ಮೆಂಟ್‌ನ ಬುಕ್ಕಿಂಗ್‌ಗಾಗಿ ಗ್ರಾಹಕರು ನಗರದ ಕಾಪಿಕಾಡ್‌ನ ಸುಪ್ರಭಾತ್ ಬಿಲ್ಡಿಂಗ್‌ನಲ್ಲಿರುವ ಭಾರ್ಗವಿ ಬಿಲ್ಡರ್ಸ್‌ ಸಂಸ್ಥೆಯ ಕಚೇರಿ(ಮೊ.ಸಂ.: 96117 30555/ 70909 33900)ಯನ್ನು ಸಂಪರ್ಕಿಸಬಹುದು ಅಥವಾ www.bhargavibuilders.com ಭೇಟಿ ನೀಡಬಹುದು ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

ಕೈಲಾಶ್ ಫ್ಲಾಟ್‌ನ ವಿಶೇಷತೆಗಳು

►ಇನ್ಫಿನಿಟಿ ಸ್ವಿಮ್ಮಿಂಗ್ ಪೂಲ್ ಆನ್ ರೂಫ್ ಟಾಪ್ ಮಿನಿ ಥಿಯೇಟರ್
►ಹವಾನಿಯಂತ್ರಿತ ಜಿಮ್ನೇಶಿಯಂ
►ಒಳಾಂಗಣ ಹಾಗೂ ಹೊರಾಂಗಣ ಆಟದ ತಾಣ
►ಮಕ್ಕಳ ಆಟದ ತಾಣ
►ಗ್ರಂಥಾಲಯ, ಯೋಗ ಪೆವಿಲಿಯನ್
►ವಿಶಾಲವಾದ ಡಬಲ್ ಹೈಟ್ ಹೊಂದಿರುವ ವಿಸಿಟರ್ಸ್‌ ಲೋಬಿ
►ಇಂಟರ್‌ಕಾಮ್ ಮತ್ತು ಆ್ಯಕ್ಸೆಸ್ ಕಂಟ್ರೋಲ್ಡ್ ಲಾಬಿ ಎಂಟ್ರೆನ್ಸ್
►ಸೋಲಾರ್ ಪ್ಯಾನೆಲ್ಸ್, ಸಿಸಿಟಿವಿ ಕ್ಯಾಮರಾ
►ರೆಟಿಕ್ಯುಲೇಟೆಡ್ ಗ್ಯಾಸ್ ಕನೆಕ್ಷನ್
►ಎರಡು ಸ್ವಯಂಚಾಲಿತ ಲಿಫ್ಟ್
►ಕಾರ್ ಪಾರ್ಕಿಂಗ್ ಮತ್ತು ಜನರೇಟರ್ ವ್ಯವಸ್ಥೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News