ಜ.25ರಂದು ಕಾಪು ಮಿನಿ ವಿಧಾನಸೌಧಕ್ಕೆ ಶಿಲಾನ್ಯಾಸ

Update: 2021-01-24 07:23 GMT

ಕಾಪು, ಜ.24: ಕಾಪು ಪ್ರವಾಸಿ ಬಂಗ್ಲೆ ಆವರಣದಲ್ಲಿರುವ ಜಮೀನಿನಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಮಿನಿ ವಿಧಾನಸೌಧಕ್ಕೆ ಜ.25ರಂದು ಸಂಜೆ ಕಂದಾಯ ಸಚಿವ ಆರ್. ಅಶೋಕ್ ಶಿಲಾನ್ಯಾಸ ನೆರವೇರಿಸಲಿದ್ದಾರೆ.

ಸಂಜೆ 3:30ಕ್ಕೆ ವಿಧಾನ ಪರಿಷತ್ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಶಾಸಕ ಲಾಲಾಜಿ ಆರ್. ಮಂಡನ್ ಅಧ್ಯಕ್ಷತೆ ವಹಿಸಲಿದ್ದಾರೆ.

ಸಚಿವರಾದ ಬಸವರಾಜ್ ಬೊಮ್ಮಾಯಿ, ಕೋಟ ಶ್ರೀನಿವಾಸ ಪೂಜಾರಿ, ವಿ.ಸೋಮಣ್ಣ, ಸಂಸದೆ ಶೋಭಾ ಕರಂದ್ಲಾಜೆ ಭಾಗವಹಿಸಲಿದ್ದಾರೆ.

ಕರ್ನಾಟಕ ಗೃಹ ಮಂಡಳಿಯ ಮೂಲಕ 3.42 ಎಕರೆ ಜಮೀನಿನಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಯೋಜನೆಯಲ್ಲಿ ನಿರ್ಮಾಣಗೊಳ್ಳಲಿದೆ. ಮಿನಿ ವಿಧಾನಸೌಧವು 2,857 ಚ. ಮೀ. ವಿಸ್ತೀರ್ಣದ ಸುತ್ತಳತೆ ಹೊಂದಿರಲಿದ್ದು, ತಹಶೀಲ್ದಾರ್ ಕಚೇರಿ ಸಹಿತ 30 ಇಲಾಖೆಗಳು ಕಾರ್ಯಾಚರಿಸಲಿವೆ. ಮಿನಿ ವಿಧಾನಸೌಧದಲ್ಲಿ ತಾಲೂಕು ಮ್ಯಾಜೀಸ್ಟ್ರೇಟ್ ಕಚೇರಿ, ತಾಲೂಕು ನ್ಯಾಯಾಲಯ ಒಳಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News