ಜಮ್ಮು-ಕಾಶ್ಮೀರ: ಭಾರತೀಯ ಸೇನೆಯ ಹೆಲಿಕಾಪ್ಟರ್ ಪತನ, ಇಬ್ಬರು ಪೈಲಟ್ ಸ್ಥಿತಿ ಗಂಭೀರ

Update: 2021-01-25 15:37 GMT

ಹೊಸದಿಲ್ಲಿ: ಭಾರತೀಯ ಸೇನೆಯ ಸುಧಾರಿತ ಹಗುರ ಹೆಲಿಕಾಪ್ಟರ್ ಧ್ರುವ್ ಸೋಮವಾರ  ಜಮ್ಮುಕಾಶ್ಮೀರ-ಪಂಜಾಬ್ ಗಡಿಯ ಸಮೀಪದ ಕಥುವಾ ಜಿಲ್ಲೆಯ ಲಖನ್ ಪುರದಲ್ಲಿ ಪತನಗೊಂಡಿದ್ದು, ಘಟನೆಯಲ್ಲಿ ಇಬ್ಬರು ಪೈಲಟ್ ಗಳು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇಬ್ಬರು ಪೈಲಟ್ ಗಳನ್ನು ಹೆಲಿಕಾಪ್ಟರ್ ಪತನಗೊಂಡಿರುವ ಸ್ಥಳದಿಂದ ಸೇನಾ ಶಿಬಿರದ ಸಮೀಪದ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಕಥುವಾ ಜಿಲ್ಲೆಯ ಪೊಲೀಸ್ ಮುಖ್ಯಸ್ಥ ಶೈಲೇಂದ್ರ ಕುಮಾರ್ ಮಿಶ್ರಾ ಘಟನೆಯನ್ನು ಖಚಿತಪಡಿಸಿದ್ದಾರೆ.

ಸೇನೆಯ ಧ್ರುವ್ ಹೆಲಿಕಾಪ್ಟರ್ ಲಖನ್ ಪುರ ಸಮೀಪ ಪತನವಾಗಿದೆ. ಘಟನೆಯಲ್ಲಿ ಸೇನೆಯ ಇಬ್ಬರು ಪೈಲಟ್ ಗಾಯಗೊಂಡಿದ್ದು, ಪಠಾಣ್ ಕೋಟ್ ನ ಸೇನಾ ಶಿಬಿರದ ಆಸ್ಪತ್ರೆಗೆ ಅವರನ್ನು ಕಳುಹಿಸಲಾಗಿದೆ ಎಂದು ಮಿಶ್ರಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News