ಕಾಮೆಡಿಯನ್‌ ಮುನವ್ವರ್‌ ಫಾರೂಕಿ ಬಂಧನ ಪ್ರಕರಣ: ʼಇಂತಹವರನ್ನು ಸುಮ್ಮನೆ ಬಿಡಬಾರದುʼ ಎಂದ ಜಡ್ಜ್‌

Update: 2021-01-25 17:20 GMT

ಇಂಧೋರ್‌,ಜ.25: ಹಿಂದೂ ದೇವರುಗಳನ್ನು ಅವಮಾನ ಮಾಡಿದ ಆರೋಪದ ಮೇರೆಗೆ ಕಾಮೆಡಿಯನ್‌ ಮುನವ್ವರ್‌ ಫಾರೂಕಿಯನ್ನುಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿನ ಜಾಮೀನು ಅರ್ಜಿಯ ವಿಚಾರಣೆಯು ಮುಂದಿನ ಎರಡು ಮೂರು ದಿನಗಳ ಒಳಗೆ ನಡೆಯಲಿದೆ ಎಂದು indianexpress.com ವರದಿ ಮಾಡಿದೆ.

ಈ ಕುರಿತಾದಂತೆ ಇಂದು ನಡೆದ ಕಲಾಪದಲ್ಲಿ ನ್ಯಾಯಾಧೀಶ ರೋಹಿತ್‌ ಆರ್ಯ, "ನೀವ್ಯಾಕೆ ಇನ್ನೊಬ್ಬರ ಧಾರ್ಮಿಕ ನಂಬಿಕೆಗಳಿಗೆ ಘಾಸಿ ತರುತ್ತಿದ್ದೀರಿ? ನಿಮ್ಮ ಮನಸ್ಥಿತಿಗೆ ಏನಾದರೂ ತೊಂದರೆ ಇದೆಯೇ? ನಿಮ್ಮ ಬ್ಯುಸಿನೆಸ್‌ ನ ಕಾರಣಕ್ಕಾಗಿ ಇಂತಹಾ ಕಾರ್ಯಗಳನ್ನು ಏಕೆ ಮಾಡುತ್ತಿದ್ದೀರಿ? ಎಂದು ಪ್ರಶ್ನಿಸಿದ್ದಾಗಿ ವರದಿ ತಿಳಿಸಿದೆ.

ಫಾರೂಕಿ ಪರ ವಕೀಲ ವಿವೇಕ್‌ ಟಂಕಾರೊಂದಿಗೆ ಜಾಮೀನು ಅರ್ಜಿಯನ್ನು ರದ್ದುಗೊಳಿಸುತ್ತೀರೇ? ಎಂದು ನ್ಯಾಯಾಧೀಶರು ಪ್ರಶ್ನಿಸಿದ್ದಾರೆ ಎನ್ನಲಾಗಿದೆ. "ಆತ ಯಾವುದೇ ತಪ್ಪನ್ನು ಮಾಡಿಲ್ಲ, ಜಾಮೀನು ನೀಡಲೇಬೇಕು" ಎಂದು ವಕೀಲರು ಹೇಳಿದ್ದಾಗಿ ವರದಿ ತಿಳಿಸಿದೆ. ಈ ವೇಳೆ ಇನ್ನೋರ್ವ ವಕೀಲರು, "ಮುನವ್ವರ್‌ ಫಾರೂಖಿ ರಾಮ ಮತ್ತು ಸೀತೆಯನ್ನು ಅವಹೇಳನ ಮಾಡಿದ್ದಾನೆ ಎಂದಾಗ "ಇಂತಹಾ ವ್ಯಕ್ತಿಗಳನ್ನು ಸುಮ್ಮನೆ ಬಿಡಬಾರದು" ಎಂದು ನ್ಯಾಯಾಧೀಶರು ಹೇಳಿದ್ದಾಗಿ ವರದಿ ತಿಳಿಸಿದೆ.

ಮುನವ್ವರ್‌ ಫಾರೂಖಿ ಕಾಮಿಡಿ ಮಾಡುತ್ತಿದ್ದ ಸಂದರ್ಭ ಸಂಘಪರಿವಾರ ಕಾರ್ಯಕರ್ತರು ಕಾರ್ಯಕ್ರಮವನ್ನು ಅರ್ಧದಲ್ಲೇ ನಿಲ್ಲಿಸಿ ಅವರು ಹಿಂದೂ ದೇವರಿಗೆ ಅವಮಾನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಆದರೆ ಅವರ ಕಾರ್ಯಕ್ರಮದಲ್ಲಿ ಯಾವುದೇ ಅವಹೇಳನಕಾರಿ ಸಂಗತಿಗಳು ಪ್ರಸ್ತಾಪವಾಗಿಲ್ಲ ಎಂದು ಬಳಿಕ ಪೊಲೀಸರೇ ಹೇಳಿಕೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News