ದಿಲ್ಲಿಯಲ್ಲಿ ರೈತರಿಗೆ ಹೂಮಳೆ ಸ್ವಾಗತಗೈದ ಜನರು

Update: 2021-01-26 07:18 GMT

ಹೊಸದಿಲ್ಲಿ: ಕಳೆದ 2 ತಿಂಗಳುಗಳಿಂದ ದಿಲ್ಲಿ ಗಡಿಭಾಗಗಳಲ್ಲಿ ಕೇಂದ್ರ ಸರಕಾರದ ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿದ್ದ ರೈತರು ಟ್ರ್ಯಾಕ್ಟರ್ ರ್ಯಾಲಿ ನಡೆಸುವ ಉದ್ದೇಶದಿಂದ ಇದೇ ಮೊದಲ ಬಾರಿ ದಿಲ್ಲಿಯೊಳಗೆ ದಾಂಗುಡಿ ಇಡುತ್ತಿದ್ದಾರೆ. ಟ್ರ್ಯಾಕ್ಟರ್, ಇತರ ವಾಹನಗಳಲ್ಲಿ ದಿಲ್ಲಿಗೆ ಆಗಮಿಸುತ್ತಿರುವ ರೈತರಿಗೆ ದಿಲ್ಲಿ ಜನತೆ ಹೂಮಳೆ ಸುರಿಸಿ ಸ್ವಾಗತಿಸಿದ್ದಾರೆ.

ರಿಂಗ್ ರೋಡ್ ನತ್ತ ತೆರಳುತ್ತಿರುವ ರೈತರು ಅಲ್ಲಿಂದ ಬೃಹತ್ ಟ್ರ್ಯಾಕ್ಟರ್ ಪರೇಡ್ ನಡೆಸಲಿದ್ದಾರೆ.
ಟ್ರ್ಯಾಕ್ಟರ್ ಗಳಲ್ಲದೆ ಕ್ರೇನ್ ನೊಂದಿಗೆ ಬಂದಿರುವ ರೈತರು ಕೆಲವು ಕಡೆಗಳಲ್ಲಿ ರಸ್ತೆಗೆ ಅಡ್ಡಲಾಗಿಟ್ಟ ಬ್ಯಾರಿಕೇಡ್ ಗಳನ್ನು ಕಿತ್ತೆಸೆದಿದ್ದಾರೆ. ಹೀಗಾಗಿ ಪೊಲೀಸರು ಅವರ ಮೇಲೆ ಲಾಠಿಚಾರ್ಜ್ ಹಾಗೂ ಅಶ್ರುವಾಯು ಸಿಡಿಸಿದ್ದಾರೆ.

ಟ್ರ್ಯಾಕ್ಟರ್ ರ್ಯಾಲಿ ಶಿಸ್ತಿನಿಂದ ನಡೆಯಲು ರೈತರ ಸಂಘಟನೆಗಳು ಸಾವಿರಾರು ಸ್ವಯಂ ಸೇವಕರನ್ನು ನಿಯೋಜಿಸಿದ್ದಾರೆ. 
ರೈತರ ಟ್ರ್ಯಾಕ್ಟರ್ ರ್ಯಾಲಿಯಲ್ಲಿ ಪಂಜಾಬ್, ಹರ್ಯಾಣ ಹಾಗೂ ಉತ್ತರಪ್ರದೇಶದಿಂದ ರೈತರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News