ಪೊಲೀಸರ ಮತ್ತು ರೈತರ ನಡುವೆ ಘರ್ಷಣೆ: ನಿರಂತರ ಅಶ್ರುವಾಯು ಪ್ರಯೋಗ

Update: 2021-01-26 07:56 GMT

ಹೊಸದಿಲ್ಲಿ,ಜ.26: ಕೇಂದ್ರ ಸರಕಾರದ ನೂತನ ಕೃಷಿ ಕಾಯ್ದೆಯನ್ನು ಹಿಂಪಡೆಯಬೇಕೆಂಬ ನಿಟ್ಟಿನಲ್ಲಿ ರೈತರು ಗಣರಾಜ್ಯೋತ್ಸವ ದಿನವಾದ ಇಂದು ರಾಷ್ಟ್ರ ರಾಜಧಾನಿ ದಿಲ್ಲಿಗೆ ಟ್ರ್ಯಾಕ್ಟರ್‌ ರ್ಯಾಲಿಯನ್ನು ಹಮ್ಮಿಕೊಂಡಿದ್ದಾರೆ. ಸದ್ಯ ಪರಿಸ್ಥಿತಿಯು ಕೈ ಮೀರುವ ಹಂತದಲ್ಲಿದ್ದು, ಪೊಲೀಸರು ನಿರಂತರ ಅಶ್ರುವಾಯು ಸಿಡಿಸುತ್ತಿದ್ದಾರೆ ಹಾಗೂ ಲಾಠಿ ಚಾರ್ಜ್‌ ಮಾಡುತ್ತಿದ್ದಾರೆಂದು ಪ್ರಮುಖ ಮಾಧ್ಯಮಗಳು ವರದಿ ಮಾಡಿದೆ.

ಟ್ರ್ಯಾಕ್ಟರ್‌ ರ್ಯಾಲಿಯನ್ನು ತಡೆಯಲೆಂದು ಪೊಲೀಸರು ಬಸ್‌ ಹಾಗೂ ಟ್ಯಾಂಕರ್‌ ಗಳನ್ನು ಅಡ್ಡಲಾಗಿಟ್ಟಿದ್ದು, ಇವುಗಳನ್ನು ದಾಟಿದ ರೈತರು ದಿಲ್ಲಿಯ ಕೇಂದ್ರಭಾಗಕ್ಕೆ ದಾಪುಗಾಲಿಡಲು ಸನ್ನದ್ಧರಾಗಿದ್ದಾರೆ. ಈಗಾಗಲೇ ಪೊಲೀಸರ ಮತ್ತು ರೈತರ ನಡುವೆ ಘರ್ಷಣೆಗಳು ನಡೆಯುತ್ತಿದ್ದು, ನಿರಂತರವಾಗಿ ಅಶ್ರುವಾಯು ಸಿಡಿಸಲಾಗುತ್ತಿದೆ. ಬ್ಯಾರಿಕೇಡ್‌ ದಾಟಿಕೊಂಡು ಮುನ್ನಡೆಯಲು ಪ್ರಯತ್ನಿಸುತ್ತಿರುವ ರೈತರಿಗೆ ಪೊಲೀಸರು ಲಾಠಿ ಚಾರ್ಜ್‌ ಮಾಡುತ್ತಿದ್ದಾರೆ. ವರದಿಗಳ ಪ್ರಕಾರ, ಕೆಲವು ರೈತರು ಹಾಗೂ ಪೊಲೀಸರು ಘರ್ಷಣೆಯಲ್ಲಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News