ಕೆಂಪುಕೋಟೆಯ ಆವರಣದಲ್ಲಿ ಕಿಸಾನ್‌ ಯೂನಿಯನ್‌ ಧ್ವಜಾರೋಹಣ

Update: 2021-01-26 08:45 GMT

ಹೊಸದಿಲ್ಲಿ,ಜ.26: ಕೇಂದ್ರ ಸರಕಾರದ ನೂತನ ಕೃಷಿ ಕಾಯ್ದೆಯನ್ನು ಹಿಂಪಡೆಯಬೇಕೆಂಬ ನಿಟ್ಟಿನಲ್ಲಿ ರೈತರು ಗಣರಾಜ್ಯೋತ್ಸವ ದಿನವಾದ ಇಂದು ರಾಷ್ಟ್ರ ರಾಜಧಾನಿ ದಿಲ್ಲಿಗೆ ಟ್ರ್ಯಾಕ್ಟರ್‌ ರ್ಯಾಲಿಯನ್ನು ಹಮ್ಮಿಕೊಂಡಿದ್ದು, ಸದ್ಯ ಹಿಂಸಾಚಾರಕ್ಕೆ ತಿರುಗಿದೆ. ಇದೀಗ ರೈತರ ಗುಂಪುಗಳು ಕೆಂಪುಕೋಟೆಯ ಆವರಣವನ್ನು ಪ್ರವೇಶಿಸಿದ್ದು, ಮುತ್ತಿಗೆಯ ಪ್ರಯತ್ನಗಳು ನಡೆಯುತ್ತಿವೆ ಎಂದು ndtv.com ವರದಿ ಮಾಡಿದೆ.

ಕೆಂಪುಕೋಟೆಯ ಆವರಣಕ್ಕೆ ಪ್ರವೇಶಿಸಿರುವ ರೈತರು ಅದರ ಮುಂಭಾಗದಲ್ಲಿ ತಮ್ಮ ಟ್ರ್ಯಾಕ್ಟರ್‌ ಗಳೊಂದಿಗೆ ಪ್ರವೇಶಿಸಿದ್ದಾರೆ. ಈ ನಡುವೆ ರೈತನೋರ್ವ ಕೆಂಪುಕೋಟೆಯ ಮುಂಭಾಗದಲ್ಲಿರುವ ಧ್ವಜಸ್ತಂಭಕ್ಕೆ ಹತ್ತಿ ಅಲ್ಲಿ ಭಾರತೀಯ ಕಿಸಾನ್‌ ಯೂನಿಯನ್‌ ನ ಧ್ವಜವನ್ನು ಹಾರಿಸಿದ್ದು ವೀಡಿಯೋ ಮತ್ತು ಚಿತ್ರಗಳ ಮೂಲಕ ವ್ಯಕ್ತವಾಗಿದೆ. ಪ್ರದೇಶದಲ್ಲಿ ಪೊಲೀಸರು ಜಮಾವಣೆಗೊಂಡಿದ್ದು, ಪರಿಸ್ಥಿತಿಯನ್ನು ತಹಬದಿಗೆ ತರುವಲ್ಲಿ ಪ್ರಯತ್ನ ಮಾಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News