ಮೋದಿ ಸರಕಾರಕ್ಕೆ ಸಂದೇಶ ಕೊಟ್ಟಿದ್ದೇವೆ, ಇನ್ನು ಕೆಂಪುಕೋಟೆ ಬಿಟ್ಟು ತೆರಳುತ್ತೇವೆ: ರೈತರ ಹೇಳಿಕೆ

Update: 2021-01-26 09:38 GMT

ಹೊಸದಿಲ್ಲಿ,ಜ.26: ಗಣರಾಜ್ಯೋತ್ಸವ ದಿನವಾದ ಇಂದು ಸುಮಾರು ಎರಡು ತಿಂಗಳುಗಳಿಂದ ದಿಲ್ಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರು ಟ್ರಾಕ್ಟರ್‌ ರ್ಯಾಲಿಯ ಮೂಲಕ ರಾಜಧಾನಿಗೆ ಆಗಮಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರತಿಭಟನಾಕಾರರು ದೇಶದ ಐತಿಹಾಸಿಕ ಸ್ಮಾರಕ ಕೆಂಪುಕೋಟೆಗೆ ಮುತ್ತಿಗೆ ಹಾಕಿ ಧ್ವಜಾರೋಹಣ ಮಾಡಿದ್ದು, ಸದ್ಯ ರೈತರು ಅಲ್ಲಿಂದ ತೆರಳುತ್ತಿದ್ದಾರೆ ಎಂದು ndtv.com ವರದಿ ಮಾಡಿದೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರತಿಭಟನಾನಿರತ ರೈತರು, "ನಾವು ನರೇಂದ್ರ ಮೋದಿ ಸರಕಾರಕ್ಕೆ ಯಾವ ಸಂದೇಶವನ್ನು ತಲುಪಿಸಬೇಕೆಂದಿದ್ದೇವೆಯೋ, ಅದನ್ನು ತಲುಪಿಸಿದ್ದೇವೆ. ಇನ್ನು ನಾವು ಕೆಂಪುಕೋಟೆಯನ್ನು ಬಿಟ್ಟು ತೆರಳುತ್ತೇವೆ. ಕೆಂಪುಕೋಟೆಗೆ ತಲುಪುವಲ್ಲಿ ನಮಗೆ ತುಂಬಾ ಅಡೆತಡೆಗಳು ಉಂಟಾಯಿತು. ಆದರೆ ನಾವು ನಮ್ಮ ಗುರಿ ಮುಟ್ಟುವವರೆಗೆ ನಿಲ್ಲುವುದಿಲ್ಲ. ಮೂರು ವಿವಾದಾತ್ಮಕ ಕಾಯ್ದೆಗಳನ್ನು ಹಿಂಪಡೆಯಲೇಬೇಕು ಎಂದು ಹೇಳಿಕೆ ನೀಡಿದ್ದಾಗಿ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News