ದಿಲ್ಲಿಯ ಹಲವು ಭಾಗಗಳಲ್ಲಿ ಮಧ್ಯರಾತ್ರಿಯವರೆಗೆ ಇಂಟರ್ನೆಟ್‌ ಸ್ಥಗಿತ

Update: 2021-01-26 10:42 GMT

ಹೊಸದಿಲ್ಲಿ,ಜ.26: ಗಣರಾಜ್ಯೋತ್ಸವ ದಿನದಂದು ರೈತರು ನಡೆಸಿದ ಟ್ರ್ಯಾಕ್ಟರ್‌ ರ್ಯಾಲಿಯು ಹಿಂಸಾತ್ಮಕ ಸ್ವರೂಪಕ್ಕೆ ತಿರುಗಿದ್ದು, ಈಗಾಗಲೇ ಓರ್ವ ರೈತ ಮೃತಪಟ್ಟು, ಹಲವಾರು ಮಂದಿ ಗಾಯಗೊಂಡಿದ್ದಾರೆ. ಇನ್ನೂ ಹಿಂಸಾಚಾರ ಮುಂದುವರಿಯುತ್ತಿರುವ ಕಾರಣದಿಂದಾಗಿ ದಿಲ್ಲಿಯ ಹಲವು ಭಾಗಗಳಲ್ಲಿ ಇಂಟರ್ನೆಟ್‌ ಸ್ಥಗಿತಗೊಳಿಸುವಂತೆ ಗೃಹ ಇಲಾಖೆ ಸೂಚನೆ ನೀಡಿದೆ ಎಂದು ತಿಳಿದು ಬಂದಿದೆ.

ರೈತರು ಪ್ರತಿಭಟನೆ ನಡೆಸುತ್ತಿರುವ ಪ್ರಮುಖ ಭಾಗಗಳಾದ ಸಿಂಘು, ಗಾಝಿಪುರ್‌, ಟಿಕ್ರಿ, ಮುಕರ್ಬ ಚೌಕ್‌, ನಂಗ್ಲೋಯಿ ಹಾಗೂ ಸುತ್ತಮುತ್ತಲಿನ ಇನ್ನಿತರ ಪ್ರದೇಶಗಳಲ್ಲಿ ಇಂದು ಮಧ್ಯರಾತ್ರಿಯವರೆಗೆ ಇಂಟರ್ನೆಟ್‌ ಸ್ಥಗಿತಗೊಳಿಸುವಂತೆ ಭಾರತೀಯ ಗೃಹ ಇಲಾಖೆಯು ಸೂಚನೆ ನೀಡಿದೆ ಎಂದು ತಿಳಿದು ಬಂದಿದೆ. ಪರಿಸ್ಥಿತಿಯು ತಿಳಿಯಾಗುವವರೆಗೆ ಇಂಟರ್ನೆಟ್‌ ನಿಷೇಧ ಮುಂದುವರಿಯುವ ಸಾಧ್ಯತೆಗಳಿವೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News