×
Ad

ಯಾವ ಸರಕಾರವೂ ರೈತರ ವಿರುದ್ಧ ಗೆಲುವು ಪಡೆದ ಇತಿಹಾಸವಿಲ್ಲ: ನವಜೋತ್‌ ಸಿಂಗ್‌ ಸಿಧು

Update: 2021-01-26 22:01 IST

ಹೊಸದಿಲ್ಲಿ,ಜ.26: ಕೇಂದ್ರ ಸರಕಾರವು ಜಾರಿಗೆ ತಂದಿರುವ ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳಿಗೆ ತಡೆ ನೀಡಬೇಕೆಂದು ಗಣರಾಜ್ಯೋತ್ಸವ ದಿನವಾದ ಇಂದು ರೈತರು ಟ್ರಾಕ್ಟರ್‌ ಪರೇಡ್‌ ನಡೆಸಿದ್ದರು. ಪ್ರತಿಭಟನೆಯು ಹಿಂಸಾತ್ಮಕ ಸ್ವರೂಪಕ್ಕೆ ತಿರುಗಿದ್ದು, ಭಾರತದ ಐತಿಹಾಸಿಕ ಸ್ಮಾರಕ ಕೆಂಪುಕೋಟೆಗೆ ನುಗ್ಗಿದ ಪ್ರತಿಭಟನಕಾರರು ಅಲ್ಲಿ ತಮ್ಮ ಧ್ವಜವನ್ನು ನೆಟ್ಟಿದ್ದರು. ಇದೀಗ ಈ ಕುರಿತು ಮಾಜಿ ಕ್ರಿಕೆಟಿಗ, ಕೇಂದ್ರದ ಮಾಜಿ ಸಚಿವ ನವಜೋತ್‌ ಸಿಂಗ್‌ ಸಿಧು ಟ್ವೀಟ್‌ ಮಾಡಿದ್ದಾರೆ.

ಪ್ರಕರಣದ ಕುರಿತು ಟ್ವೀಟ್‌ ಮಾಡಿದ ಸಿಧು, ಯಾವ ಸರಕಾರವೂ ರೈತರ ವಿರುದ್ಧ ಗೆಲುವು ಪಡೆದ ಇತಿಹಾಸವಿಲ್ಲ ಎಂದು ಹೇಳಿಕೆ ನೀಡಿದ್ದಾರೆ. “ನೀವು ಇತಿಹಾಸದಿಂದ ಪಾಠ ಕಲಿಯಬೇಕು. ಇಲ್ಲದಿದ್ದರೆ ಇತಿಹಾಸವು ಮರುಕಳಿಸುತ್ತಲೇ ಇರುತ್ತದೆ. ಇತಿಹಾಸವು ನಮಗೆ ಹೇಳುವುದೇನೆಂದರೆ, “ರೈತರ ವಿರುದ್ಧ ಯಾವ ಸರಕಾರವೂ ಗೆಲುವು ಪಡೆದ ಚರಿತ್ರೆಯಿಲ್ಲ” ಎಂದಾಗಿದೆ ಎಂದು ಸಿಧು ಟ್ವೀಟ್‌ ಮಾಡಿದ್ದಾರೆ.

“ರೈತರು ಎರಡು ತಿಂಗಳುಗಳ ಕಾಲ ಚಳಿಯಲ್ಲಿ ಕುಳಿತು ಸಾವಧಾನದಿಂದ, ತಾಳ್ಮೆಯಿಂದ ಸರಕಾರವು ಕಾಯ್ದೆಯನ್ನು ಹಿಂಪಡೆಯುತ್ತದೆಯೇ ಎಂದು ಕಾದರು. ಆದರೆ ಯಾವುದೇ ಬದಲಾವಣೆ ಉಂಟಾಗಲಿಲ್ಲ. ಹೃದಯವೇ ಇಲ್ಲದ ಸರಕಾರ ರೈತರ ದನಿಗೆ ಕಿವಿಯಾಗಲಿಲ್ಲ” ಎಂದು ಬಳಕೆದಾರರೋರ್ವರು ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News