×
Ad

ಸೂರತ್: ರೈತರನ್ನು ಬೆಂಬಲಿಸಿ ರ‍್ಯಾಲಿ ನಡೆಸಿದ ಪಟಿದಾರ್ ಮುಖಂಡರ ಬಂಧನ

Update: 2021-01-26 23:31 IST

ಸೂರತ್, ಜ.26: ಪ್ರತಿಭಟನಾ ನಿರತ ರೈತರನ್ನು ಬೆಂಬಲಿಸಿ ಮತ್ತು ಪಟಿದಾರ್ ಮುಖಂಡರ ವಿರುದ್ಧ ದಾಖಲಿಸಿರುವ ಕ್ರಿಮಿನಲ್ ಆರೋಪ ಕೈಬಿಡುವಂತೆ ಆಗ್ರಹಿಸಿ ಮಂಗಳವಾರ ತಿರಂಗ ರ‍್ಯಾಲಿ ನಡೆಸಿದ ಪಟಿದಾರ್ ಅನಾಮತ್ ಆಂದೋಲನ ಸಮಿತಿ(ಪಿಎಎಎಸ್)ಯ ಕನಿಷ್ಟ 400 ಮುಖಂಡರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಮಂಗಳವಾರ ವಿವಿಧ ತಂಡಗಳಾಗಿ ಸೂರತ್‌ನ ವರಚ್ಚ, ಕಪೋದರ ಪ್ರದೇಶಗಳಲ್ಲಿ ಟ್ರಾಕ್ಟರ್, ದ್ವಿಚಕ್ರ ವಾಹನಗಳಲ್ಲಿ ತಿರಂಗ ರ‍್ಯಾಲಿ ಆಯೋಜಿಸಲಾಗಿತ್ತು. ವರಚ್ಚದಿಂದ ರ್ಯಾಲಿ ಆರಂಭವಾಗುತ್ತಿದ್ದಂತೆಯೇ ಅವರನ್ನು ಪೊಲೀಸರು ತಡೆದರು. ಬಳಿಕ ಐಪಿಸಿ ಸೆಕ್ಷನ್ 188ರಡಿ ಬಂಧಿಸಲಾಗಿದೆ. ಬಂಧಿತರಲ್ಲಿ ಪಿಎಎಸ್‌ನ ರಾಜ್ಯ ಸಂಯೋಜಕ ಅಲ್ಪೇಶ್ ಕಥೇರಿಯಾ, ಸೂರತ್ ನಗರ ಸಂಯೋಜಕ ಧಾರ್ಮಿಕ್ ಮಾಳವೀಯ, ಕಾಂಗ್ರೆಸ್‌ನ 6 ಕಾರ್ಪೊರೇಟರ್‌ಗಳೂ ಸೇರಿದ್ದಾರೆ. ಪೊಲೀಸರ ಅನುಮತಿ ಪಡೆಯದೆ ತಿರಂಗಾ ರ್ಯಾಲಿ ಹಮ್ಮಿಕೊಂಡಿರುವುದರಿಂದ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News