18 ಮಹಿಳೆಯರನ್ನು ಹತ್ಯೆಗೈದ ಸರಣಿ ಹಂತಕ ಸೆರೆ

Update: 2021-01-27 08:19 GMT

ಹೈದರಾಬಾದ್: ಹದಿನೆಂಟು ಮಹಿಳೆಯರ ಹತ್ಯೆ ಸಹಿತ ಇತರ ಅಪರಾಧಗಳಲ್ಲಿ ಭಾಗಿಯಾದ ಆರೋಪದಲ್ಲಿ 45ರ ವಯಸ್ಸಿನ ಸರಣಿ ಹಂತಕನನ್ನು ತೆಲಂಗಾಣದ ಹೈದರಾಬಾದ್ ನಗರದ ಜುಬಿಲಿ ಹಿಲ್ಸ್ ನಲ್ಲಿ ಬಂಧಿಸಲಾಗಿದೆ ಎಂದು ಮಂಗಳವಾರ ಪೊಲೀಸರು ತಿಳಿಸಿದ್ದಾರೆ.

20 ದಿನಗಳ ತನಿಖೆಯ ಬಳಿಕ ಸರಣಿ ಹಂತಕ ಮೈನಾ ರಾಮುಲು ಎಂಬಾತನನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಈತ ಕಾರ್ಮಿಕನಾಗಿದ್ದು, ಕಲ್ಲ್ಲುಕಡಿಯುವ ವೃತ್ತಿ ಮಾಡುತ್ತಿದ್ದ. ಹೈದರಾಬಾದ್ ನಿವಾಸಿಯಾಗಿದ್ದಾನೆ.

ಈ ಬಂಧನದೊಂದಿಗೆ ಇತ್ತೀಚೆಗೆ ರಾಜ್ಯದಲ್ಲಿ ನಡೆದಿರುವ ಮಹಿಳೆಯರ ಹತ್ಯೆ ಪ್ರಕರಣವನ್ನು ಪತ್ತೆ ಹಚ್ಚಲಾಗಿದೆ.

ಈ ವ್ಯಕ್ತಿಯನ್ನು ಈ ಮೊದಲು 21 ಪ್ರಕರಣಗಳಿಗೆ ಸಂಬಂಧಿಸಿ ಬಂಧಿಸಲಾಗಿತ್ತು. ಒಂದು ಪ್ರಕರಣದಲ್ಲಿ ಪೊಲೀಸ್ ಕಸ್ಟಡಿಯಿಂದ ಈ ವ್ಯಕ್ತಿ ಪರಾರಿಯಾಗಿದ್ದಾನೆ.

21ನೇ ವಯಸ್ಸಿನಲ್ಲಿ ಮದುವೆಯಾಗಿದ್ದ ಈ ವ್ಯಕ್ತಿಯ ಪತ್ನಿ ಸ್ವಲ್ಪ ಸಮಯದಲ್ಲಿ ಆ ವ್ಯಕ್ತಿಯನ್ನು ಬಿಟ್ಟು ಹೋಗಿದ್ದಳು. ಇದರಿಂದ ಮಹಿಳೆಯರ ವಿರುದ್ಧ ದ್ವೇಷ ಸಾಧಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಈ ವ್ಯಕ್ತಿ 2003ರಲ್ಲಿ ಕ್ರಿಮಿನಲ್ ಚಟುವಟಿಕೆ ಆರಂಭಿಸಿದ್ದ. ಒಂಟಿ ಮಹಿಳೆಗೆ ಹಣ ನೀಡಿ ಯಾಮಾರಿಸುತ್ತಿದ್ದ. ಬಳಿಕ ಮಹಿಳೆಗೆ ಮದ್ಯ ಹಾಗೂ ವಿಷಪ್ರಾಸನಗೈದು ಸಾಯಿಸುತ್ತಿದ್ದ. ಬಳಿಕ ಅಮೂಲ್ಯ ವಸ್ತುವನ್ನು ದೋಚುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News