ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಪ್ರಕರಣ: ಬಾಂಬೆ ಹೈಕೋರ್ಟ್‍ನ ವಿವಾದಾಸ್ಪದ ಆದೇಶಕ್ಕೆ ಸುಪ್ರೀಂ ತಡೆ

Update: 2021-01-27 09:04 GMT

ಹೊಸದಿಲ್ಲಿ: ಅಪ್ರಾಪ್ತೆಯ ಖಾಸಗಿ ಭಾಗಗಳನ್ನು ವಸ್ತ್ರದ ಮೇಲಿನಿಂದಲೇ ಸವರುವುದು ಪೋಕ್ಸೋ ಕಾಯಿದೆಯನ್ವಯ 'ಲೈಂಗಿಕ ದೌರ್ಜನ್ಯವಲ್ಲ' ಎಂದು ಬಾಂಬೆ ಹೈಕೋರ್ಟ್ ಜನವರಿ 9ರಂದು ನೀಡಿದ್ದ ವಿವಾದಾಸ್ಪದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ಹಿಡಿದಿದೆ.  ಬಾಂಬೆ ಹೈಕೋರ್ಟ್ ಆದೇಶ ಅಪಾಯಕಾರಿ ಪೂರ್ವನಿದರ್ಶನವಾಗಬಹುದೆಂದು ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್  ಇಂದು ನ್ಯಾಯಾಲಯದಲ್ಲಿ ಹೇಳಿದ್ದಾರೆ.

ಲೈಂಗಿಕ ಉದ್ದೇಶದಿಂದ ನೇರ ದೇಹದ ನಡುವೆ ಸಂಪರ್ಕವಿಲ್ಲದೇ ಇದ್ದರೆ ಅದನ್ನು ಲೈಂಗಿಕ ಹಲ್ಲೆ ಎಂದು ಪರಿಗಣಿಸಲಾಗದು, ಬಟ್ಟೆ ಧರಿಸಿದ್ದಾಗ ಖಾಸಗಿ ಅಂಗ ಸ್ಪರ್ಶಿಸಿದ್ದರೆ ಪೋಕ್ಸೋ ಕಾಯಿದೆಯಡಿ ಶಿಕ್ಷೆ ನೀಡಲು ಸಾಧ್ಯವಿಲ್ಲ ಎಂದು ಜಸ್ಟಿಸ್ ಪುಷ್ಪಾ  ಗನೇಡಿವಾಲ ತಮ್ಮ ಆದೇಶದಲ್ಲಿ ಹೇಳಿದ್ದರು.

ಹನ್ನೆರಡು ವರ್ಷದ ಬಾಲಕಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣದಲ್ಲಿ 39 ವರ್ಷದ ಆರೋಪಿಯನ್ನು ಕೆಳಗಿನ ಹಂತದ ನ್ಯಾಯಾಲಯ ಪೋಕ್ಸೋ ಕಾಯಿದೆಯಡಿ ತಪ್ಪಿತಸ್ಥನೆಂದು ಘೋಷಿಸಿದ್ದರೂ ಬಾಂಬೆ ಹೈಕೋರ್ಟ್ ಆತನನ್ನು ಪೋಕ್ಸೋ ಕಾಯಿದೆಯಡಿ ದೋಷಮುಕ್ತಗೊಳಿಸಿತ್ತು ಆದರೆ ಐಪಿಸಿ ಸೆಕ್ಷನ್ 354 ಅನ್ವಯ ಆತ ತಪ್ಪಿತಸ್ಥ ಎಂದು ಘೋಷಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News