ಕೆಂಪುಕೋಟೆಯ ಮೇಲೆ ಧ್ವಜ ಹಾರಿಸಿದ್ದ ಯುವಕನ ಕುಟುಂಬ ಪಂಜಾಬ್ ನಿಂದ ಪಲಾಯನ

Update: 2021-01-28 07:34 GMT

ಹೊಸದಿಲ್ಲಿ,ಜ.28: ರೈತರ ಪ್ರತಿಭಟನೆಯ ಸಂದರ್ಭದಲ್ಲಿ ದೇಶದ ಐತಿಹಾಸಿಕ ಸ್ಮಾರಕ ಕೆಂಪುಕೋಟೆಯ ಮೇಲೆ ಪ್ರತಿಭಟನಾನಿರತ ರೈತರು ನಿಶಾನ್ ಸಾಹಿಬ್ ಮತ್ತು ಖಲ್ಸಾಧ್ವಜವನ್ನು ಹಾರಿಸಿದ್ದರು. ಕೆಂಪುಕೋಟೆಯ ಮುಂಭಾಗದ ಧ್ವಜಸ್ಥಂಭಕ್ಕೆ ಹತ್ತಿ ಧ್ವಜ ಹಾರಿಸಿದ ಜುಗ್ ರಾಜ್ ಸಿಂಗ್ ಎಂಬಾತನ ಕುಟುಂಬ ಮತ್ತು ಗ್ರಾಮಸ್ಥರು ಈ ಮೊದಲು ಯುವಕನನ್ನು ಕೊಂಡಾಡಿದ್ದರೆ, ಇದೀಗ ಪೊಲೀಸರ ಕ್ರಮದ ಭೀತಿಯಿಂದ ಭಯಭೀತರಾಗಿದ್ದಾರೆ ಎಂದು timesofindia.com ವರದಿ ಮಾಡಿದೆ. 

ವನ್‌ ತಾರ ಸಿಂಗ್‌ ನ ನಿವಾಸಿಯಾಗಿರುವ 23 ವರ್ಷದ ಜುಗ್‌ ರಾಜ್‌ ಸಿಂಗ್‌ ಎಂಬಾತ ಕೆಂಪುಕೋಟೆಯ ಧ್ವಜಸ್ಥಂಭದಲ್ಲಿ ನಿಶಾನ್‌ ಸಾಹಿಬ್‌ ಅನ್ನು ಹಾರಿಸಿದ್ದ ಎನ್ನಲಾಗಿದೆ. ಇದೀಗ ಆತನ ಮನೆಯಲ್ಲಿ ಆತನ ಅಜ್ಜ, ಅಜ್ಜಿಯನ್ನು ಮಾತ್ರ ಉಳಿಸಿ ಜುಗ್‌ ರಾಜ್‌ ನ ತಂದೆ ತಾಯಿ ಊರಿನಿಂದ ಪಲಾಯನಗೈದಿದ್ದಾರೆ ಎಂದು ತಿಳಿದು ಬಂದಿದೆ. ಪೊಲೀಸರ ಮತ್ತು ಮಾಧ್ಯಮಗಳ ಭೀತಿಯಿಂದ ಅವರು ಊರು ತೊರೆದಿರುವುದಾಗಿ timesofindia.com ವರದಿ ಮಾಡಿದೆ.

ಜುಗ್‌ ರಾಜ್‌ ಕೆಂಪುಕೋಟೆಯಲ್ಲಿ ಧ್ವಜ ಹಾರಿಸಿದರ ಕುರಿತು ಅವರ ಅಜ್ಜ ಮೆಹಲ್‌ ಸಿಂಗ್‌ ರನ್ನು ಪ್ರಶ್ನಿಸಿದಾಗ, "ಅದು ಹೇಗೆ ನಡೆಯಿತು ಅನ್ನುವುದರ ಕುರಿತು ನಮಗೆ ತಿಳಿದಿಲ್ಲ. ಅವನು ತುಂಬಾ ಸಾಧು ಸ್ವಭಾವದ ಯುವಕ. ಇದುವರೆಗೂ ಯಾವುದೇ ದೂರುಗಳು ಆತನ ಹೆಸರಿನಲ್ಲಿ ಬಂದಿರಲಿಲ್ಲ" ಎಂದು ಹೇಳಿಕೆ ನೀಡಿದ್ದಾರೆ. 

ಈ ಕುರಿತು ಮಾತನಾಡಿದ ಗ್ರಾಮದ ಹಿರಿಯ ವ್ಯಕ್ತಿ ಪ್ರೇಮ್‌ ಸಿಂಗ್‌, "ಇದು ನಿಜಕ್ಕೂ ದುರದೃಷ್ಟಕರ ಘಟನೆಯಾಗಿದೆ. ಐತಿಹಾಸಿಕ ಸ್ಮಾರಕ ಕೆಂಪುಕೋಟೆಯ ಮೇಲೆ ಧ್ವಜ ಹಾರಿಸಿದರ ಪರಿಣಾಮ ಏನಾಗಬಹುದುಎಂಬುವುದು ಆತನಿಗೆ ಗೊತ್ತಿರಲಿಲ್ಲ. ಅದು ಆ ಸಂದರ್ಭದಲ್ಲಿ ಕೆಲವರು ಧ್ವಜವನ್ನು ಆತನ ಕೈಗೆ ಕೊಟ್ಟಿದ್ದರಿಂದ ಹೀಗಾಯಿತು. ಇದಕ್ಕಾಗಿ ಪೂರ್ವ ತಯಾರಿಗಳು ನಡೆದಿರಲು ಸಾಧ್ಯವಿಲ್ಲ. ಆತ ತುಂಬಾ ಸಾಧು ಸ್ವಭಾವದ ಯುವಕ" ಎಂದು ಹೇಳಿಕೆ ನೀಡಿದ್ದಾಗಿ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News