"ನಿಮ್ಮ ವಿರುದ್ಧ ಕಾನೂನು ಕ್ರಮವೇಕೆ ಕೈಗೊಳ್ಳಬಾರದು?": ರೈತ ನಾಯಕನಿಗೆ ದಿಲ್ಲಿ ಪೊಲೀಸರ ಪತ್ರ

Update: 2021-01-28 10:22 GMT

ಹೊಸದಿಲ್ಲಿ,ಜ.28: ನಿಮ್ಮ ವಿರುದ್ಧ ಹಾಗೂ ನಿಮ್ಮ ಸಂಘಟನೆಯ ಇತರ ಸದಸ್ಯರ ವಿರುದ್ಧ ಕಾನೂನು ಕ್ರಮವೇಕೆ ಕೈಗೊಳ್ಳಬಾರದು ಎಂಬ ಕುರಿತು ವಿವರಣೆ ಕೋರಿ ದಿಲ್ಲಿ ಪೊಲೀಸರು  ಕ್ರಾಂತಿಕಾರಿ ಕಿಸಾನ್ ಯೂನಿಯನ್ ನಾಯಕ ದರ್ಶನ್ ಪಾಲ್ ಸಿಂಗ್ ಅವರನ್ನು ಪ್ರಶ್ನಿಸಿ ಪತ್ರ ಬರೆದಿದ್ದಾರೆ. ಗಣತಂತ್ರ ದಿನದಂದು ರೈತರ ಟ್ರ್ಯಾಕ್ಟರ್ ರ್ಯಾಲಿ ಸಂದರ್ಭ ಹಿಂಸಾಚಾರ ನಡೆದ ಮರುದಿನ ದಿಲ್ಲಿ ಪೊಲೀಸರ ಈ ಪತ್ರ ರೈತ ನಾಯಕನಿಗೆ ಬಂದಿದೆ.

ಪತ್ರಕ್ಕೆ ಡಿಸಿಪಿ (ಮುಖ್ಯ ಕಾರ್ಯಾಲಯ) ಚಿನ್ಮೊಯ್ ಬಿಸ್ವಾಲ್ ಅವರು ಸಹಿ ಹಾಕಿದ್ದು ಮೂರು ದಿನಗಳೊಳಗಾಗಿ ಪ್ರತಿಕ್ರಿಯಿಸುವಂತೆ ಸೂಚಿಸಲಾಗಿದೆ.

"ನಿಮ್ಮ ಸಂಘಟನೆಯಲ್ಲಿ ಇಂತಹ ಹಿಂಸಾತ್ಮಕ ಘಟನೆಗಳ ಹಿಂದಿರುವವರ  ಹೆಸರುಗಳನ್ನು ನೀಡುವಂತೆಯೂ ನಿಮಗೆ ಸೂಚಿಸಲಾಗಿದೆ" ಎಂದು ಪತ್ರದಲ್ಲಿ ಹೇಳಲಾಗಿದೆ.

ಈ ಪತ್ರದ ಕುರಿತು ಸಿಂಗ್ ಇನ್ನೂ ಪ್ರತಿಕ್ರಿಯಿಸಿಲ್ಲ, ಅವರಿಗೆ ಪತ್ರವಿನ್ನೂ ತಲುಪಿಲ್ಲ ಎಂದು ಅವರ ಸಂಘಟನೆಯ ಕೆಲ ಸದಸ್ಯರು ಹೇಳಿದ್ದಾರೆ. ಟ್ರ್ಯಾಕ್ಟರ್ ರ್ಯಾಲಿಯನ್ನು ಮೂರು ನಿರ್ದಿಷ್ಟ ಮಾರ್ಗಗಳ ಮೂಲಕವೇ ಹಾದು ಹೋಗುವಂತೆ ಮಾಡುವ ಕುರಿತಾಗಿ ಒಪ್ಪಂದಕ್ಕೆ ಬಂದಿದ್ದರೂ  ನೀವು ಮತ್ತು ಇತರ ನಾಯಕರು ಬೇಜವಾಬ್ದಾರಿಯುತವಾಗಿ ವರ್ತಿಸಿದ್ದೀರಿ ಎಂದು ಪತ್ರದಲ್ಲಿ ಬರೆಯಲಾಗಿದೆ.

ಪರಸ್ಪರ ಒಪ್ಪಿಕೊಂಡಿದ್ದಕ್ಕಿಂತ ಹೆಚ್ಚಿನ ಸಂಖ್ಯೆಯ ಟ್ರ್ಯಾಕ್ಟರ್‍ಗಳಿದ್ದವು. ಷರತ್ತುಗಳನ್ನು ಉಲ್ಲಂಘಿಸಿ ನಿಮ್ಮ ಸಂಘಟನೆಯ ಹಲವರು ಶಸ್ತ್ರಾಸ್ತ್ರಗಳನ್ನೂ ಹೊಂದಿದ್ದರು ಎಂದು ಪತ್ರದಲ್ಲಿ ಆಕ್ಷೇಪ ಸೂಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News