×
Ad

ಅಂತರ್ ರಾಷ್ಟ್ರೀಯ ವಿಮಾನಯಾನಗಳ ನಿಷೇಧ ಫೆ.28ರವರೆಗೆ ವಿಸ್ತರಣೆ

Update: 2021-01-28 22:29 IST

ಹೊಸದಿಲ್ಲಿ,ಜ.28: ಕೊರೋನವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಅಂತರ್ ರಾಷ್ಟ್ರೀಯ ಪ್ರಯಾಣಿಕ ವಿಮಾನಯಾನಗಳ ಮೇಲಿನ ನಿರ್ಬಂಧ ಫೆ.28ರವರೆಗೂ ಜಾರಿಯಲ್ಲಿರಲಿದೆ ಎಂದು ನಾಗರಿಕ ವಾಯುಯಾನ ಮಹಾನಿರ್ದೇಶನಾಲಯ(ಡಿಜಿಸಿಎ)ವು ಗುರುವಾರ ತಿಳಿಸಿದೆ. ಈ ನಿರ್ಬಂಧವು ಸರಕು ಸಾಗಾಣಿಕೆ ಮತ್ತು ಡಿಜಿಸಿಎದ ನಿರ್ದಿಷ್ಟ ಅನುಮತಿಯನ್ನು ಪಡೆದುಕೊಂಡಿರುವ ಯಾನಗಳಿಗೆ ಅನ್ವಯಿಸುವುದಿಲ್ಲ.

ಮಾರ್ಚ್‌ನಲ್ಲಿ ಕೋವಿಡ್-19 ಲಾಕ್‌ಡೌನ್ ಘೋಷಿಸಿದ ಸಂದರ್ಭದಲ್ಲಿ ದೇಶಿಯ ಮತ್ತು ಅಂತರರಾಷ್ಟ್ರಿಯ ವಿಮಾನಗಳನ್ನು ಸ್ಥಗಿತಗೊಳಿಸಲಾಗಿತ್ತು. ಜೂನ್‌ನಿಂದ ವಂದೇ ಭಾರತ ಅಭಿಯಾನದಡಿ ಏರ್ ಇಂಡಿಯಾದ ಸೀಮಿತ ವಿದೇಶಯಾನಗಳಿಗೆ ಸರಕಾರವು ಅವಕಾಶ ನೀಡಿತ್ತು. ಮೇ 25ರಿಂದ ಸೀಮಿತ ಸಂಖ್ಯೆಯಲ್ಲಿ ದೇಶಿಯ ವಿಮಾನಯಾನಗಳಿಗೆ ಅನುಮತಿ ನೀಡಲಾಗಿತ್ತು.

ತನ್ಮಧ್ಯೆ ಭಾರತದಲ್ಲಿ ಗುರುವಾರ 11,666 ಹೊಸ ಕೊರೋನ ಪ್ರಕರಣಗಳು ವರದಿಯಾಗಿದ್ದು,ಒಟ್ಟು ಪ್ರಕರಣಗಳ ಸಂಖ್ಯೆ 1.07,01,193ಕ್ಕೇರಿದೆ. ಹೊಸದಾಗಿ 123 ಸಾವುಗಳು ವರದಿಯಾಗಿದ್ದು,ಒಟ್ಟು ಸಾವುಗಳ ಸಂಖ್ಯೆ 1,53,847ಕ್ಕೇರಿದೆ. 1,73,740 ಸಕ್ರಿಯ ಪ್ರಕರಣಗಳಿದ್ದು,ಇವರೆಗೆ 25 ಲಕ್ಷಕ್ಕೂ ಅಧಿಕ ಜನರು ಲಸಿಕೆಯನ್ನು ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News