×
Ad

ನಾಥೂರಾಮ್‌ ಗೋಡ್ಸೆ ಓರ್ವ ಹೇಡಿ ಮತ್ತು ಭಯೋತ್ಪಾದಕ: ನಟ ಸಿದ್ದಾರ್ಥ್

Update: 2021-01-30 13:10 IST

ಹೈದರಾಬಾದ್‌,ಜ.30: ಭಾರತದ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರನ್ನು ನಾಥೂರಾಮ್‌ ಗೋಡ್ಸೆ ಗುಂಡಿಕ್ಕಿ ಕೊಂದು 73 ವರ್ಷಗಳು ಕಳೆದಿವೆ. ಹಲವಾರು ಭಾರತೀಯರಿಗೆ ಇದೊಂದು ದುಃಖದ ದಿನವಾಗಿದ್ದು, ಜನವರಿ 30ರಂದು ಹುತಾತ್ಮ ದಿನವನ್ನಾಗಿ ಆಚರಿಸಲಾಗುತ್ತಿದೆ. ಇದೀಗ ಈ ಕುರಿತಾದಂತೆ ಖ್ಯಾತ ಬಹುಭಾಷಾ ನಟ ಸಿದ್ಧಾರ್ಥ್‌ ಟ್ವೀಟ್‌ ಮಾಡಿದ್ದಾರೆ.

ಟ್ವಿಟರ್‌ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ ಅವರು, "ನಾಥೂರಾಮ್‌ ಗೋಡ್ಸೆ ಓರ್ವ ಹೇಡಿ, ಓರ್ವ ಭಯೋತ್ಪಾದಕ, ಆರೆಸ್ಸೆಸ್ಸಿಗ ಮತ್ತು ಓರ್ವ ಕೊಲೆಗಾರ. ಗೋಡ್ಸೆಯ ನೆನಪು ಮತ್ತು ಆತನ ಹೆಸರು ಎಲ್ಲ ಭಾರತೀಯರಿಗೂ ಕಳಂಕ ಮತ್ತು ಮುಜುಗರ ತರಿಸುತ್ತದೆ. ಗಾಂಧೀಜಿ ಅಮರ್‌ ರಹೇ" ಎಂದು ಟ್ವೀಟ್‌ ಮಾಡಿದ್ದಾರೆ.

ಈ ನಡುವೆ ಟ್ವಿಟರ್‌ ನಾದ್ಯಂತ ಮಹಾತ್ಮ ಗಾಂಧಿಯ ಹೆಸರಿನೊಂದಿಗೆ ನಾಥೂರಾಮ್‌ ಗೋಡ್ಸೆಯ ಹೆಸರು ಕೂಡಾ ಟ್ರೆಂಡಿಂಗ್‌ ಆಗುತ್ತಿದ್ದು, ಹಲವಾರು ಮಂದಿ ಸಂಘಪರಿವಾರ ಬೆಂಬಲಿಗರು ನಾಥೂರಾಮ್‌ ಗೋಡ್ಸೆಯನ್ನು ಪ್ರಶಂಸಿಸಿ ಟ್ವೀಟ್‌ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News