×
Ad

"ಆರಂಭಗೊಳ್ಳುವ ಮುನ್ನವೇ ಅಂತ್ಯ ಕಂಡ ಜಗತ್ತಿನ ಅತ್ಯಂತ ವೇಗದ ಉಪವಾಸ"

Update: 2021-01-30 15:30 IST

 ಹೊಸದಿಲ್ಲಿ,ಜ.30: ಕೃಷಿ ಕಾಯಿದೆಗಳನ್ನು ವಿರೋಧಿಸಿ ಹಾಗೂ ಪ್ರತಿಭಟನಾನಿರತ ರೈತರಿಗೆ ಬೆಂಬಲಾರ್ಥವಾಗಿ ತಾವು ಜನವರಿ 30ರಿಂದ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ಹೇಳಿದ್ದ ಹಿರಿಯ ಸಾಮಾಜಿಕ ಹೋರಾಟಗಾರ ಅಣ್ಣಾ ಹಝಾರೆ, ಶುಕ್ರವಾರ ರಾತ್ರಿ  ಹಠಾತ್ ನಿರ್ಧಾರ ಕೈಗೊಂಡು ತಮ್ಮ ಉಪವಾಸ ಸತ್ಯಾಗ್ರಹವನ್ನು ವಾಪಸ್ ಪಡೆದು ಎಲ್ಲರ ಹುಬ್ಬೇರಿಸಿದ ಬೆನ್ನಿಗೇ ಟ್ವಿಟ್ಟರ್‍ನಲ್ಲಿ ಇದು ಹಲವಾರು ಸ್ವಾರಸ್ಯಕರ ಪ್ರತಿಕ್ರಿಯೆಗಳಿಗೆ ಕಾರಣವಾಯಿತು.

"ಅವರು ಉಪವಾಸ ಕೈಗೊಳ್ಳುತ್ತಾರೆ ಎಂದು ಯಾರಿಗಾದರೂ ತಿಳಿಯುವ ಮೊದಲೇ ಅಣ್ಣಾ ಹಝಾರೆ ತಮ್ಮ ಉಪವಾಸ ವಾಪಸ್ ಪಡೆದಿದ್ದಾರೆ. ಒಮ್ಮೆ ಅವರನ್ನು ಗಾಂಧೀಜಿಯೊಂದಿಗೆ ಹೋಲಿಕೆ ಮಾಡಲಾಗಿತ್ತು ಎಂಬುದೇ ದುರಂತ" ಎಂದು ಸಲೀಲ್ ತ್ರಿಪಾಠಿ ಎಂಬವರು ಟ್ವೀಟ್ ಮಾಡಿದ್ದಾರೆ.

"ಬ್ರೇಕಿಂಗ್ : ಆಕ್ಸ್ ಫರ್ಡ್ ನಿಘಂಟು `ಫ್ರಾಡ್' ಪದದ ಬದಲು ಅಣ್ಣಾ ಹಝಾರೆ ಪದ ಬಳಸಿದೆ" ಎಂದು ಅನುರಾಗ್ ಎಂಬವರು ಬರೆದಿದ್ದಾರೆ.

"ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗ ನನ್ನನ್ನು ಎಬ್ಬಿಸಿ ಎಂದು ಅಣ್ಣಾ ಹಝಾರೆ  ಹೇಳುವಂತಿದೆ" ಎಂದು ರೂಹಿ ಟ್ವೀಟ್ ಮಾಡಿದ್ದಾರೆ.

"ಅಣ್ಣಾ ಹಝಾರೆ ಅವರ ಉಪವಾಸ  ಆರಂಭಗೊಳ್ಳುವ ಮುನ್ನವೇ ಅಂತ್ಯಗೊಂಡಿದೆ. ಇದು ಅಧಿಕೃತವಾಗಿ ಇತಿಹಾಸದಲ್ಲಿಯೇ ಅತ್ಯಂತ ವೇಗದ ಉಪವಾಸ" ಎಂದು ಯಾಂಗರ್ ಲಾಂಗ್‍ಕುಮೇರ್ ಬರೆದಿದ್ದಾರೆ.

"ಅಣ್ಣಾ ಹಝಾರೆ- ಫಾರ್ಸ್ (ಪ್ರಹಸನ) ಅನ್‍ಟು ಡೆತ್' ಎಂದು ತುಷಾರ್ ಎಂಬವರು ಮಾರ್ಮಿಕವಾಗಿ ಬರೆದಿದ್ದರೆ  ಇನ್ನೊಬ್ಬರು ಟ್ವೀಟ್ ಮಾಡಿ "ನಾನು 16 ವರ್ಷದವಳಿರುವಾಗ ಅಣ್ಣಾ ಹಝಾರೆಯಂತಹ ಟೋಪಿ ಧರಿಸಿ  ಕಾಂಗ್ರೆಸ್ ವಿರೋಧಿ ಜೋಕ್‍ಗಳನ್ನು ಎಫ್‍ಬಿಯಲ್ಲಿ ಮಾಡಿದ್ದಕ್ಕೆ ನನಗೆ ನಾನೇ ಕಪಾಳಮೋಕ್ಷ ಮಾಡಿಕೊಳ್ಳಬೇಕಿದೆ" ಎಂದು ಪರಿತಪಿಸಿದ್ದಾರೆ.

ಜನವರಿ ೩೦ರಂಉ ರೈತರ ಪ್ರತಿಭಟನೆಯನ್ನು ಬೆಂಬಲಿಸಿ ನಾನು ಹುಟ್ಟೂರಿನಲ್ಲೇ ಉಪವಾಸ ಸತ್ಯಾಗ್ರ ಕೈಗೊಳ್ಳುತ್ತೇನೆಂದು ಅಣ್ಣಾ ಹಝಾರೆ ಹೇಳಿಕೆ ನೀಡಿದ್ದರು. ನಂತರ ಬಿಜೆಪಿ ನಾಯಕರು ಅವರನ್ನು ಭೇಟಿಯಾದ ಬಳಿಕ ಉಪವಾಸ ಕೈಗೊಳ್ಳುವುದಿಲ್ಲ ಎಂದು ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News