ಮುಹಿಯ್ಯುದ್ದೀನ್ ಜುಮಾ ಮಸೀದಿ ಬೊಳ್ಳೂರು : ನೂತನ ಗಲ್ಫ್ ಸಮಿತಿ ಅಸ್ತಿತ್ವಕ್ಕೆ

Update: 2021-02-02 07:41 GMT

ಹಳೆಯಂಗಡಿ: ಮುಹಿಯ್ಯುದ್ದೀನ್ ಜುಮಾ ಮಸೀದಿ ಬೊಳ್ಳೂರು ಇದರ ನೂತನ ಗಲ್ಫ್ ಸಮಿತಿಯನ್ನು ಸೌದಿ ಅರೆಬಿಯಾದ ಜುಬೈಲ್ ನಲ್ಲಿ ಶನಿವಾರ ರಾತ್ರಿ ಅಸ್ತಿತ್ವಕ್ಕೆ ತರಲಾಯಿತು.

ಕಾರ್ಯಕ್ರಮವನ್ನು ಅನೀಸ್ ಹುಸೈನ್ ಬೊಳ್ಳೂರು ಕಿರಾಅತ್ ಮೂಲಕ ಉದ್ಘಾಟಿಸಿ, ಗಲ್ಫ್ ಸಮಿತಿ ಅಗತ್ಯತೆ ಮತ್ತು ನೂತನ ಯೋಜನೆಗಳ ಕುರಿತು ವಿವರಿಸಿದರು.

2021-22 ನೇ ಸಾಲಿನ ನೂತನ ಅಧ್ಯಕ್ಷರಾಗಿ ಅನೀಸ್ ಹುಸೈನ್ ಬೊಳ್ಳೂರು ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಎ.ಕೆ ಕಬೀರ್, ಪ್ರಧಾನ ಕಾರ್ಯದರ್ಶಿಯಾಗಿ ಎ.ಕೆ. ಸಿರಾಜುದ್ದಿನ್, ಜೊತೆ ಕಾರ್ಯದರ್ಶಿಯಾಗಿ ಸಿನಾನ್ ರೈಲ್ವೆಗೇಟ್ ಮತ್ತು ಝಮೀರ್ ಕೊಪ್ಪಳ, ಗಲ್ಫ್ ಸಮಿತಿ ಕೋ ಆರ್ಡಿನೇಟರ್ ಆಗಿ ಕಲಂದರ್ ಪರಂಗಿಬೊಟ್ಟು ಅವರನ್ನು ಆಯ್ಕೆ ಮಾಡಲಾಯಿತು.

ಮಸ್ಕತ್  ಕೋ ಆರ್ಡಿನೇಟರ್ ಆಗಿ ಮೊಯ್ದಿನ್ ಪರಂಗಿಬೊಟ್ಟು, ಕತರ್ ಕೋ ಆರ್ಡಿನೇಟರ್ ಆಗಿ ಆಶ್ರಫ್ ಇಂದಿರಾನಗರ ಅವರನ್ನು ಆಯ್ಕೆ ಮಾಡಲಾಯಿತು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News