ಕಾಪು: ನೂತನ ಕೃಷಿ ನೀತಿ, ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ

Update: 2021-02-02 10:00 GMT

ಕಾಪು : ನೂತನ ಕೃಷಿ ನೀತಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನವಿರೋಧಿ ಧೋರಣೆಯನ್ನು ಖಂಡಿಸಿ ಮತ್ತು ಬೀಡಿ ಕಾರ್ಮಿಕರ ಹಿತಾಸಕ್ತಿಗಾಗಿ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ (ದಕ್ಷಿಣ) ವತಿಯಿಂದ ಮಂಗಳವಾರ ಕಾಪು ಪೇಟೆಯಲ್ಲಿ ಪ್ರತಿಭಟನಾ ಸಭೆ ನಡೆಯಿತು.

ಕಾಪು ಶ್ರೀ ಜನಾರ್ಧನ ದೇವಸ್ಥಾನದ ವಠಾರದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಕಾಪು ಪೇಟೆಗೆ ಕಾಲ್ನಡಿಗೆ ಜಾಥಾ ಮೂಲಕ ಪೇಟೆಗೆ ತೆರಳಿ ಪ್ರತಿಭಟನಾ ಸಭೆ ನಡೆಸಿದರು. ಮಾಜಿ ಸಚಿವ ವಿನಯಕುಮಾರ್ ಸೊರಕೆ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ನೂರಾರು ಮಂದಿ ಬೀಡಿ ಕಾರ್ಮಿಕರು ಭಾಗವಹಿಸಿದ್ದರು. ಈ ವೇಳೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಹಾಗೂ ಸಂಸದರ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿದರರು.

ಬೀಡಿ ಕಾರ್ಮಿಕರ ಜೀವನಕ್ಕೆ ಮಾರಕ ವಾಗಲಿರುವ ಕಾಯ್ದೆಯನ್ನು ತರುವ ಮೂಲಕ ಬೀಡಿ ಕಾರ್ಮಿಕರ ಬದುಕಿಗೆ ಕೊಡಲಿಯೇಟು ನೀಡಲು ಹೊರಟಿದೆ ಅಲ್ಲದೆ ದೇಶದ ಬೆನ್ನೆಲುಬಾದ ರೈತರಿಗೆ , ಕಾರ್ಮಿಕರಿಗೆ ಕಂಟಕಪ್ರಾಯವಾದ ನೂತನ ಕಾಯ್ದೆಗಳನ್ನು ಜಾರಿಗೆ ತಂದು ರೈತರ, ಕಾರ್ಮಿಕರ ಬದುಕನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ದುಸ್ತರಗೊಳಿಸಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು.

ನವೀನ್ ‌ಚಂದ್ರ ಜೆ. ಶೆಟ್ಟಿ, ಸಿಐಟಿಯುನ ಕವಿರಾಜ್, ಮಹಾಬಲ್ ವಡೇರ ಹೋಬಳಿ, ವೈ. ಸುಧೀರ್ ಕುಮಾರ್, ನವೀನ್‌ಚಂದ್ರ ಸುವರ್ಣ, ವೈ. ಸುಕುಮಾರ್,  ಶಿವಾಜಿ ಸುವರ್ಣ, ನವೀನ್ ಎನ್. ಶೆಟ್ಟಿ, ಪ್ರಭಾ ವಿ. ಶೆಟ್ಟಿ, ಅಖಿಲೇಶ್ ಕೋಟ್ಯಾನ್, ಸೌರಭ್ ಬಳ್ಳಾಲ್, ಕೀರ್ತಿ ಶೆಟ್ಟಿ, ಸಾಧಿಕ್ ಮಲ್ಲಾರ್, ಹರೀಶ್ ಶೆಟ್ಟಿ ಪಾಂಗಾಳ, ರಮೀಝ್ ಹುಸೈನ್, ಕೀರ್ತಿ ಕುಮಾರ್, ಕೇಶವ್ ಹೆಜಮಾಡಿ, ಅಮೀರ್ ಮುಹಮ್ಮದ್, ಹರೀಶ್ ನಾಯಕ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News