ಅತೀ ಕಿರಿಯ ಮಹಿಳಾ ಪೈಲಟ್ ಹೆಗ್ಗಳಿಕೆಗೆ ಪಾತ್ರರಾದ ಕಾಶ್ಮೀರದ ಆಯಿಷಾ ಅಝೀಝ್

Update: 2021-02-03 18:27 GMT

ಶ್ರೀನಗರ, ಫೆ.2: ಕಾಶ್ಮೀರದ 25 ವರ್ಷದ ಆಯಿಷಾ ಅಝೀಝ್ ದೇಶದ ಅತೀ ಕಿರಿಯ ಮಹಿಳಾ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2011ರಲ್ಲಿ, 15ನೆ ವಯಸ್ಸಿನಲ್ಲೇ ವಿದ್ಯಾರ್ಥಿ ಪೈಲಟ್ ಲೈಸೆನ್ಸ್ (ಎಸ್‌ಪಿಎಲ್) ಪಡೆದಿದ್ದ ಆಯಿಷಾ , 2012ರಲ್ಲಿ ರಶ್ಯದ ಸೊಕೊಲ್ ವಾಯುನೆಲೆಯಲ್ಲಿ ಮಿಗ್-29 ಜೆಟ್ ವಿಮಾನ ಚಾಲನೆಯ ತರಬೇತಿಗೆ ಸೇರಿದ್ದರು. ಬಾಂಬೆ ಫ್ಲೈಯಿಂಗ್ ಕ್ಲಬ್‌ನಲ್ಲಿ ವಾಯುಯಾನ ಪದವಿ ಪೂರೈಸಿದ್ದು 2017ರಲ್ಲಿ ವಾಣಿಜ್ಯ ಪೈಲಟ್ ಪದವಿ ಪಡೆದಿದ್ದರು.

ಕಾಶ್ಮೀರಿ ಮಹಿಳೆಯರು ಶಿಕ್ಷಣ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಉತ್ತಮ ಸಾಧನೆ ತೋರುತ್ತಿದ್ದಾರೆ. ಪೈಲಟ್ ವೃತ್ತಿ ಅತ್ಯಂತ ಸವಾಲಿನ ಕ್ಷೇತ್ರವಾಗಿದ್ದು ಬೆಳಿಗ್ಗೆ 9ರಿಂದ ಸಂಜೆ 5ರವರೆಗಿನ ಕಚೇರಿ ಕೆಲಸದಂತಲ್ಲ. ಇಲ್ಲಿ ನಿಗದಿತ ಸಮಯದ ಚೌಕಟ್ಟು ಇರುವುದಿಲ್ಲ. ಹೊಸ ಸ್ಥಳಗಳಿಗೆ ತೆರಳುವ, ಹೊಸ ಜನರನ್ನು ಭೇಟಿಯಾಗುವ, ವಿಭಿನ್ನ ಹವಾಮಾನದಲ್ಲಿ ಕೆಲಸ ಮಾಡುವ ಸವಾಲನ್ನು ಎದುರಿಸಬೇಕಾಗಿದೆ. ನಾನು ಪ್ರಯಾಣ ಮಾಡುವುದನ್ನು ಇಷ್ಟಪಡುತ್ತೇನೆ ಮತ್ತು ವಿಮಾನದಲ್ಲಿ ಸಂಚರಿಸುವುದೆಂದರೆ ನನಗೆ ಅಚ್ಚುಮೆಚ್ಚು ಎಂದು ಆಯಿಷಾ ಪ್ರತಿಕ್ರಿಯಿಸಿದ್ದಾರೆ.

ಪೈಲಟ್ ವೃತ್ತಿ ನಿರ್ವಹಿಸಲು ಮಾನಸಿಕವಾಗಿ ಅತ್ಯಂತ ದೃಢವಾಗಿರಬೇಕು. ಸುಮಾರು 200ರಷ್ಟು ಪ್ರಯಾಣಿಕರನ್ನು ಸುರಕ್ಷಿತವಾಗಿ ಕರೆದೊಯ್ಯುವ ಹೊಣೆಗಾರಿಕೆ ನಿಮ್ಮದಾಗಿರುತ್ತದೆ. ಈ ಸವಾಲು ಎದುರಿಸಲು ತಾನು ಕಾತರಳಾಗಿದ್ದೇನೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News