×
Ad

ನಾನು ಈಗಲೂ ರೈತರನ್ನು ಬೆಂಬಲಿಸುತ್ತೇನೆ, ದ್ವೇಷ, ಬೆದರಿಕೆಗಳಿಂದ ಅದನ್ನು ಬದಲಾಯಿಸಲು ಸಾಧ್ಯವಿಲ್ಲ: ಗ್ರೆಟಾ ಥನ್ಬರ್ಗ್

Update: 2021-02-04 16:49 IST

ಹೊಸದಿಲ್ಲಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವ ಖ್ಯಾತ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್ಬರ್ಗ್‌ ಭಾರತೀಯ ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಟ್ವೀಟ್‌ ಮಾಡಿದ್ದು ಸಾಮಾಜಿಕ ತಾಣದಾದ್ಯಂತ ವೈರಲ್‌ ಆಗಿತ್ತು. ಖ್ಯಾತ ಪಾಪ್‌ ಗಾಯಕಿ ರಿಹಾನ್ನಾ ಟ್ವೀಟ್‌ ಮಾಡಿದ ಬೆನ್ನಲ್ಲೇ ಗ್ರೆಟಾ ಟ್ವೀಟ್‌ ಮಾಡಿದ್ದರು. ಈ ಕುರಿತಾದಂತೆ ಹಲವಾರು ಟ್ರೋಲ್‌ ಗಳು ಮತ್ತು ನಿಂದನೆಯನ್ನು ಅವರು ಎದುರಿಸಿದ್ದು ಸಾಮಾಜಿಕ ತಾಣದಲ್ಲಿ ನೋಡಬಹುದಾಗಿದೆ. ಇದೀಗ ತಮ್ಮ ವಿರುದ್ಧದ ನಿಂದನೆಯ ಕುರಿತು ಟ್ವಿಟರ್‌ ಮುಖಾಂತರ ಗ್ರೆಟಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ನಾನು ಈಗಲೂ ರೈತರೊಂದಿಗೆ ಬೆಂಬಲಕ್ಕೆ ನಿಲ್ಲುತ್ತೇನೆ. ನಾನು ಅವರ ಶಾಂತಿಯುತ ಪ್ರತಿಭಟನೆಗೆ ಬೆಂಬಲ ನೀಡುತ್ತಿದ್ದೇನೆ. ಎಷ್ಟೇ ಪ್ರಮಾಣದ ದ್ವೇಷಪೂರಿತ ಮಾತುಗಳು, ಬೆದರಿಕೆಗಳು ಅಥವಾ ಮಾನವ ಹಕ್ಕುಗಳ ಉಲ್ಲಂಘನೆಯು ಇದನ್ನು ಬದಲಾಯಿಸಲು ಸಾಧ್ಯವಿಲ್ಲ" ಎಂದು ಅವರು ಟ್ವೀಟ್‌ ಮಾಡಿದ್ದಾರೆ. ಜೊತೆಗೆ, #ಫಾರ್ಮರ್ಸ್‌ ಪ್ರೊಟೆಸ್ಟ್‌ ಮತ್ತು #ಸ್ಟ್ಯಾಂಡ್‌ ವಿತ್‌ ಫಾರ್ಮರ್ಸ್‌ ಹ್ಯಾಶ್‌ ಟ್ಯಾಗ್‌ ಅನ್ನು ಬಳಸಿದ್ದಾರೆ. 

"ನಿಮ್ಮ ಬೆಂಬಲಕ್ಕೆ ಧನ್ಯವಾದಗಳು. ದಿಲ್ಲಿಯಲ್ಲಿ ರೈತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ವಿಶ್ವಕ್ಕೆ ಪರಿಚಯಿಸಿದ್ದಕ್ಕಾಗಿ ನಿಮಗೆ ಋಣಿಯಾಗಿದ್ದೇವೆ ಎಂದು ಬಳಕೆದಾರರೋರ್ವರು ಪ್ರತಿಕ್ರಿಯಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News