×
Ad

ಗ್ರೆಟಾ, ನಿಮ್ಮ ಮೇಲೂ ಕೇಸ್ ದಾಖಲಾಗಿದೆ, ನಮ್ಮ ಕ್ಲಬ್ ಗೆ ನಿಮಗೆ ಸ್ವಾಗತ: ಕನ್ಹಯ್ಯಾ ಕುಮಾರ್

Update: 2021-02-04 19:46 IST

ಹೊಸದಿಲ್ಲಿ: ರೈತರ ಪ್ರತಿಭಟನೆಯ ಪರವಾಗಿ ಮಾತನಾಡಿದ ಗ್ರೆಟಾ ಥನ್ಬರ್ಗ್ ವಿರುದ್ಧ ಹಲವಾರು ನಿಂದನಾತ್ಮಕ ಬರಹಗಳು, ಟ್ರೋಲ್ ಗಳು ಮತ್ತು ಬೆದರಿಕೆಗಳು ದಾಖಲಾಗಿತ್ತು. ಅಲ್ಲದೇ ದಿಲ್ಲಿ ಪೊಲೀಸರು ಗ್ರೆಟಾ ವಿರುದ್ಧ "ಕ್ರಿಮಿನಲ್ ಪಿತೂರಿ ಮತ್ತು ಧರ್ಮದ ಆಧಾರದ ಮೇಲೆ ದ್ವೇಷವನ್ನು ಉತ್ತೇಜಿಸುವುದು" ಪ್ರಕರಣವನ್ನು ದಾಖಲಿಸಿದ್ದರು. ಈ ಕುರಿತು ಇದೀಗ ಗ್ರೇಟಾ ಬೆಂಬಲಿಸಿ ಸಾಮಾಜಿಕ ಕಾರ್ಯಕರ್ತ ಕನ್ಹಯ್ಯಾ ಕುಮಾರ್ ಟ್ವೀಟ್ ಮಾಡಿದ್ದಾರೆ.

"ಡಿಯರ್ ಗ್ರೆಟಾ ಥನ್ಬರ್ಗ್, ನಮ್ಮ ಕ್ಲಬ್ ಗೆ ನಿಮಗೆ ಸ್ವಾಗತ. ಜಯ್ ಶಾರ ತಂದೆಯ ಆದೇಶದ ಮೇರೆಗೆ ನಿಮ್ಮ ವಿರುದ್ಧ ದಿಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.  ನೀವು ಇತಿಹಾಸದ ನೈಜ ಹಾದಿಯಲ್ಲಿದ್ದೀರಿ ಮತ್ತು ಉತ್ತಮ ಕಾರ್ಯಕ್ಕಾಗಿ ಹೋರಾಟ ಮಾಡುತ್ತಿದ್ದೀರಿ ಅನ್ನುವುದಕ್ಕಿರುವ ಸಾಕ್ಷಿ ಇದು. ನನ್ನ ಹಲವಾರು ಸ್ನೇಹಿತರು ಈ ಹೋರಾಟಗಳ ಭಾಗವಾಗಿದ್ದಕ್ಕೆ ಈಗಲೂ ಜೈಲಿನಲ್ಲಿದ್ದಾರೆ. ನಿಮ್ಮ ಹೋರಾಟ ಮುಂದುವರಿಸಿ" ಎಂದು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News