ಐಪಿಎಲ್ ಆಟಗಾರರ ಹರಾಜಿನ ಪಟ್ಟಿಯಲ್ಲಿ ಅರ್ಜುನ್ ತೆಂಡುಲ್ಕರ್, ಶ್ರೀಶಾಂತ್

Update: 2021-02-05 17:48 GMT

ಹೊಸದಿಲ್ಲಿ: ಚೆನ್ನೈನಲ್ಲಿ ಫೆಬ್ರವರಿ 18ರಂದು ನಿಗದಿಯಾಗಿರುವ ಬಹುನಿರೀಕ್ಷಿತ ಐಪಿಎಲ್ ಆಟಗಾರರ ಹರಾಜಿನಲ್ಲಿ ನೋಂದಣಿಯಾಗಿರುವ 1,097ರ ಆಟಗಾರರ ಪೈಕಿ ಇಂಗ್ಲೆಂಡ್ ಟೆಸ್ಟ್ ನಾಯಕ ಜೋ ರೂಟ್ ಹಾಗೂ ಆಸ್ಟ್ರೇಲಿಯದ ವೇಗಿ ಮಿಚೆಲ್ ಸ್ಟಾರ್ಕ್ ಹೊರಗುಳಿದಿದ್ದು, ಬಾಂಗ್ಲಾದೇಶದ ಆಲ್ ರೌಂಡರ್ ಶಾಕಿಬ್ ಅಲ್ ಹಸನ್ ಹಾಗೂ ಭಾರತದ ಎಸ್.ಶ್ರೀಶಾಂತ್ ಅವರಿದ್ದಾರೆ.

ಲೆಜೆಂಡರಿ ಆಟಗಾರ ಸಚಿನ್ ತೆಂಡುಲ್ಕರ್ ಪುತ್ರ ಹಾಗೂ ಎಡಗೈ ವೇಗದ ಬೌಲರ್ ಅರ್ಜುನ್ ತೆಂಡುಲ್ಕರ್ ಹರಾಜಿನ ಪಟ್ಟಿಯಲ್ಲಿದ್ದು, ಇವರ ಮೂಲ ಬೆಲೆ 20 ಲಕ್ಷ ರೂ. ಆಗಿದೆ. ಭಾರತದ ಒಟ್ಟು 814 ಆಟಗಾರರಿದ್ದು, ವಿದೇಶದ 283 ಆಟಗಾರರು ಹರಾಜಿನ ಪಟ್ಟಿಯಲ್ಲಿದ್ದಾರೆ. ವೆಸ್ಟ್ಇಂಡೀಸ್ ನಿಂದ ಅತ್ಯಂತ ಹೆಚ್ಚು(56) ಆಟಗಾರರಿದ್ದರೆ, ಆಸ್ಟ್ರೇಲಿಯ(42) ಹಾಗೂ ದಕ್ಷಿಣ ಆಫ್ರಿಕಾ(38)ಆಟಗಾರರು  ಆನಂತರದ ಸ್ಥಾನದಲ್ಲಿದ್ದಾರೆ.

ಬುಕ್ಕಿಗಳನ್ನು ತನ್ನನ್ನು ಸಂಪರ್ಕಿಸಿರುವ ಕುರಿತು ಮಾಹಿತಿ ನೀಡದ ಕಾರಣಕ್ಕೆ ಐಸಿಸಿಯಿಂದ ಅಮಾನತುಗೊಂಡಿದ್ದ ಶಾಕೀಬ್ ಗರಿಷ್ಟ ಮೂಲ ಬೆಲೆ 2 ಕೋ.ರೂ. ಹೊಂದಿದ್ದಾರೆ. 7 ವರ್ಷಗಳ ಬಳಿಕ ಸಕ್ರಿಯ ಕ್ರಿಕೆಟಿಗೆ ವಾಪಸಾಗಿರುವ ಶ್ರೀಶಾಂತ್ ಗೆ ಮೂಲ ಬೆಲೆ 75 ಲಕ್ಷ ರೂ. ನಿಗದಿಪಡಿಸಲಾಗಿದೆ ಎಂದು 'ಕ್ರಿಕ್ ಇನ್ ಫೋ' ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News