ಅಸಮಾನ ಪ್ರಗತಿಯು ಅಸ್ಥಿರತೆ, ಸಾಮಾಜಿಕ ಅಶಾಂತಿಗೆ ಕಾರಣ ಐಎಂಎಫ್ ಮುಖ್ಯಸ್ಥೆ ಎಚ್ಚರಿಕೆ

Update: 2021-02-06 18:37 GMT

ವಾಶಿಂಗ್ಟನ್, ಫೆ. 6: ಬಡ ದೇಶಗಳಿಗೆ ಹೆಚ್ಚಿನ ಸಂಪನ್ಮೂಲಗಳನ್ನು ಒದಗಿಸುವಂತೆ ಅಂತರ್‌ರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್)ಯ ಆಡಳಿತ ನಿರ್ದೇಶಕಿ ಕ್ರಿಸ್ಟಲೀನಾ ಜಾರ್ಜಿಯೇವ ಶುಕ್ರವಾರ ಶ್ರೀಮಂತ ದೇಶಗಳನ್ನು ಒತ್ತಾಯಿಸಿದ್ದಾರೆ. ಅತ್ಯಂತ ಅಸಮಾನ ಜಾಗತಿಕ ಪ್ರಗತಿಯು ಮುಂದಿನ ವರ್ಷಗಳಲ್ಲಿ ಅಸ್ಥಿರತೆ ಮತ್ತು ಸಾಮಾಜಿಕ ಅಶಾಂತಿಗೆ ಕಾರಣವಾಗಬಹುದು ಎಂದು ಅವರು ಎಚ್ಚರಿಸಿದ್ದಾರೆ.

ಐವತ್ತು ಶೇಕಡದಷ್ಟು ಅಭಿವೃದ್ಧಿಶೀಲ ದೇಶಗಳು ಇನ್ನಷ್ಟು ಹಿಂದೆ ಬೀಳುವ ಅಪಾಯವನ್ನು ಎದುರಿಸುತ್ತಿವೆ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಐಎಂಎಫ್ ಮುಖ್ಯಸ್ಥೆ ಹೇಳಿದರು. ಇದು ಜಾಗತಿಕ ಸ್ಥಿರತೆ ಮತ್ತು ಸಾಮಾಜಿಕ ಅಶಾಂತಿಯ ಸಾಧ್ಯತೆಯನ್ನು ಸೃಷ್ಟಿಸಿದೆ ಎಂದರು.

ಈ ಸಮಸ್ಯೆಗಳು ಬೃಹತ್ ಸ್ವರೂಪವನ್ನು ತಾಳುವ ಮೊದಲು, ಶ್ರೀಮಂತ ದೇಶಗಳು ಮತ್ತು ಅಂತರ್‌ರಾಷ್ಟ್ರೀಯ ಸಂಸ್ಥೆಗಳು ಮಧ್ಯಪ್ರವೇಶಿಸಬೇಕು ಎಂದು ಅವರು ಹೇಳಿದರು.

ಅದೇ ವೇಳೆ, ಸಾಲ ವ್ಯವಸ್ಥೆಯನ್ನು ಪುನರ್ರೂಪಿಸುವಂತೆ ಹಾಗೂ ಅಭಿವೃದ್ಧಿಗೆ ಪೂರಕವಾಗಿರುವ ಪರಿಸರವನ್ನು ಸೃಷ್ಟಿಸುವಂತೆ ಅವರು ಸಾಲದಿಂದ ಮುಳುಗಿರುವ ದೇಶಗಳನ್ನು ಅವರು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News