×
Ad

ಆಪರೇಷನ್‌ ಮಾಡಿದ ಬಳಿಕ ಹೊಲಿಗೆ ಬೇಕಿಲ್ಲ, ಈ ಗಮ್‌ ಸಾಕು!

Update: 2021-02-07 12:30 IST

ಸಿಡ್ನಿ: ಶಸ್ತ್ರಚಿಕಿತ್ಸೆಯ ಅಂಟು (ಗಮ್) ಅಭಿವೃದ್ಧಿಪಡಿಸಲು ಯುನೈಟೆಡ್ ಸ್ಟೇಟ್ಸ್ ಮತ್ತು ಸಿಡ್ನಿ ವಿಶ್ವವಿದ್ಯಾಲಯದ ಬಯೋಮೆಡಿಕಲ್ ಎಂಜಿನಿಯರ್‌ಗಳು ಹಲವಾರು ವರ್ಷಗಳಿಂದ ಪರಿಶ್ರಮಪಟ್ಟಿದ್ದು, ಇದೀಗ ಮುಕ್ತಾಯಗೊಂಡಿದೆ. ಇದು ಬಹಳ ಮುಖ್ಯವಾದ ಮತ್ತು ಉಪಯುಕ್ತವಾದ ಆವಿಷ್ಕಾರವಾಗಿದೆ ಎನ್ನಲಾಗಿದೆ.

ಯಾವುದೇ ಹೊಲಿಗೆಗಳು ಅಥವಾ ಸ್ಟೇಪಲ್ಸ್‌ ಗಳ ಅವಶ್ಯಕತೆಯಿಲ್ಲದೇ ಗಾಯಗಳು ಈ ಅಂಟಿನ ಕಾರಣದಿಂದಾಗಿ ತ್ವರಿತವಾಗು ಮುಚ್ಚುತ್ತದೆ ಮತ್ತು ಗಾಯ ಶಮನಗೊಳ್ಳುತ್ತದೆ ಎನ್ನಲಾಗಿದೆ. 'ಮೆಟ್ರೋ' ಎಂದು ಕರೆಯಲ್ಪಡುವ ಅಂಟು ಕೇವಲ 60 ಸೆಕೆಂಡುಗಳಲ್ಲಿ ಗಾಯಗಳನ್ನು ತ್ವರಿತವಾಗಿ ಮುಚ್ಚುತ್ತದೆ.

ಗಾಯದ ಅಂಟು ಜೆಲ್ ತರಹದ ವಸ್ತುವನ್ನು ನೇರಳಾತೀತ (ಡಬ್ಲ್ಯೂ) ಬೆಳಕಿನಿಂದ ಸಕ್ರಿಯಗೊಳಿಸುತ್ತದೆ. ಮತ್ತು ಅದು ಸ್ವಲ್ಪ ಸಮಯದ ನಂತರ ಕರಗುತ್ತದೆ. ಮೆಟ್ರೋ ಅಂಟು ದೇಹದ ಅಂಗಾಂಶಗಳಲ್ಲಿನ ಗಾಯಗಳನ್ನು ಮುಚ್ಚಲು ಸೂಕ್ತವಾಗಿದೆ, ಅದು ಹೃದಯ ಅಥವಾ ಶ್ವಾಸಕೋಶದಂತೆ ನಿರಂತರವಾಗಿ ವಿಸ್ತರಿಸುತ್ತದೆ ಮತ್ತು ವಿಶ್ರಾಂತಿ ಪಡೆಯುತ್ತದೆ ಎಂದು ವರದಿ ತಿಳಿಸಿದೆ.

ದಂಶಕಗಳು ಮತ್ತು ಹಂದಿಗಳ ಮೇಲೆ ಈ ಗಮ್‌ ಅನ್ನು ಯಶಸ್ವಿಯಾಗಿ ಪರೀಕ್ಷಿಸಲ್ಪಟ್ಟಿದೆ ಇದನ್ನು ಶೀಘ್ರದಲ್ಲೇ ಮಾನವ ಪ್ರಯೋಗಗಳಲ್ಲಿ ಬಳಸಲಾಗುತ್ತದೆ ಎಂದು ತಿಳಿದು ಬಂದಿದೆ.

ಏಷ್ಯಾದ ಪ್ರಮುಖ ಬಯೋಫಾರ್ಮಾಸ್ಯುಟಿಕಲ್ಸ್ ಎಂಟರ್ಪ್ರೈಸ್ ನ ಬಯೋಕಾನ್ ಅಧ್ಯಕ್ಷರಾಗಿರುವ ಕಿರಣ್ ಮಜುಂದಾರ್ ಶಾ ಅವರು ಗಾಯದ ಅಂಟು (ಗಮ್) ಬಗ್ಗೆ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಮೆಟ್ರೋ ಅಂಟು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುವುದನ್ನು ತಿಳಿಯಲು ಈ ಕೆಳಗಿನ ವೀಡಿಯೊವನ್ನು ನೋಡಿ:

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News